Job Description: * ಪ್ರಸ್ತುತ ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ವೇಗಿ ಬೌಲರ್ ಲಸಿತ್ ಮಾಲಿಂಗಾ ಅವರು 2021 ರ ಸೆಪ್ಟೆಂಬರ್.14 ರಂದು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ, ತಮ್ಮ ನಿವೃತ್ತಿಯ ಕುರಿತು ಅಧಿಕೃತ ಸಾಮಾಜಿಕ ತಾಣ ಖಾತೆಯಲ್ಲಿ ತಾವೇ ಪ್ರಕಟಿಸಿದ್ದಾರೆ. * ಲಸಿತ್ ಮಾಲಿಂಗಾ ಅವರು ಈ ಹಿಂದೆ 2014 ರಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ವಿಜೇತರಾಗಿದ್ದ ಶ್ರೀಲಂಕಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. * ಈ ಹಿಂದೆ 2021 ರ ಜನೇವರಿಯಲ್ಲಿ ಅವರು ಟಿ 20 ಫ್ರ್ಯಾಂಚೈಸ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು, ಆದರೆ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವಾಗಿರಲಿಲ್ಲ, ಆದರೆ ಇದೀಗ ಎಲ್ಲ ಮಾದರಿಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ. * ಲಸಿತ್ ಮಾಲಿಂಗ ಆಗಸ್ಟ್.28 1983 ರಂದು ಜನಿಸಿದ್ದಾರೆ, ಇವರು ಶ್ರೀಲಂಕಾದ ಮಾಜಿ ಕ್ರಿಕೆಟಿಗ, ಸಾರ್ವಕಾಲಿಕ ಶ್ರೇಷ್ಠ ಸೀಮಿತ ಓವರ್ ಬೌಲರ್ ಆಗಿದ್ದರು, ಹಾಗು ಇವರು ತಮ್ಮ ವೃತ್ತಿ ಜೇವನದಲ್ಲಿ ಎರಡು ವಿಶ್ವಕಪ್ ಹ್ಯಾಟ್ರಿಕ್ಗಳನ್ನು ಪಡೆದ ವಿಶ್ವದ ಏಕೈಕ ಬೌಲರ್ ಇವರಾಗಿದ್ದಾರೆ, ಹಾಗೂ ಏಕದಿನದಲ್ಲಿ 3 ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್, ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ 5 ಹ್ಯಾಟ್ರಿಕ್ಗಳನ್ನು ಪಡೆದ ಮೊದಲ ಬೌಲರ್ ಇವರಾಗಿದ್ದಾರೆ. * ಲಸಿತ್ ಮಾಲಿಂಗ ಅವರು 2019 ರ ಜುಲೈ. 26 ರಂದು ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಅವರು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು.