Job Description: * ಜಪಾನ್ ಮತ್ತು ವಿಯೆಟ್ನಾಂ ದೇಶಗಳು ರಕ್ಷಣಾ ಸಲಕರಣೆಗಾಗಿ ಇತ್ತೀಚೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ, ಜಪಾನ್ ದೇಶ ನಿರ್ಮಾಣ ಮಾಡಿರುವ ರಕ್ಷಣಾ ಉಪಕರಣ ಹಾಗೂ ತಂತ್ರಜ್ಞಾನವನ್ನು ವಿಯೆಟ್ನಾಂಗೆ ರಫ್ತು ಮಾಡಲು ಈ ಒಪ್ಪಂದ ಸಹಾಯ ಮಾಡಲಿದೆ. * ಜಪಾನ್ ಮತ್ತು ವಿಯೆಟ್ನಾಂ ದೇಶಗಳು ಚೀನಾದ ಮಿಲಿಟರಿ ಪ್ರಭಾವ ಹೆಚ್ಚುತ್ತಿರುವ ಕಾರಣದಿಂದ ತಮ್ಮ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಈ ಒಪ್ಪಂದಕ್ಕೆ ಸಹಿ ಹಾಕಿವೆ. * ಜಪಾನ್ ಮತ್ತು ವಿಯೆಟ್ನಾಂ ರಾಷ್ಟ್ರಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನೌಕಾಯಾನ ಮತ್ತು ಓವರ್ಫ್ಲೈಟ್ ಮತ್ತು ಸೈಬರ್ ಭದ್ರತೆಯ ಹಲವಾರು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಕಾಪಾಡಿಕೊಳ್ಳುಲು ಈ ಒಪ್ಪಂದಕ್ಕೆ ಸಹಿ ಹಾಕಿವೆ. * ದಕ್ಷಿಣ ಚೀನಾ ಸಮುದ್ರದಲ್ಲಿರುವ ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪ ಗುಂಪುಗಳ ಕುರಿತು ಚೀನಾದೊಂದಿಗೆ ವಿಯೆಟ್ನಾಂ ಪ್ರಾದೇಶಿಕ ವಿವಾದಗಳನ್ನು ಒಳಗೊಂಡಿದೆ.