Job Description: * ಇಂಗ್ಲೆಂಡ್ ದೇಶವು ಇವಿ ಚಾರ್ಜರ್ಗಳನ್ನು ಸ್ಥಾಪಿಸಲು ಹೊಸ ಮನೆಗಳನ್ನು ಕಡ್ಡಾಯಗೊಳಿಸಿದ ಮೊದಲ ದೇಶವಾಗಿದೆ, ಇದೀಗ ಬ್ರಿಟಿಷ್ ಸರ್ಕಾರವು 2021 ರಲ್ಲಿ ಶಾಸನವನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದೆ, ಹಾಗೂ ಈ ಶಾಸನದ ಅಡಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುವ ಎಲ್ಲಾ ಮನೆಗಳು ಮತ್ತು ಕಚೇರಿಗಳು ಇಂಗ್ಲೆಂಡ್ನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜರ್ಗಳನ್ನು ಒಳಗೊಂಡಿರಬೇಕು ಆದೇಶಿಸಿದೆ. * ಬ್ರಿಟಿಷ್ ಸರ್ಕಾರದ ಈ ಕಾನೂನಿನ ಅಡಿಯಲ್ಲಿ ಎಲ್ಲ ಹೊಸ ಮನೆ, ಕಚೇರಿ ಬ್ಲಾಕ್ಗಳು ಪ್ರತಿ 5 ಪಾರ್ಕಿಂಗ್ ಸ್ಥಳಗಳಿಗೆ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಬೇಕಾಗುತ್ತದೆ. * ಇಂಗ್ಲೆಂಡ್ ದೇಶದ ಎಲ್ಲ ಮನೆ ಮತ್ತು ಕಚೇರಿ ಇವಿ ಚಾರ್ಜರ್ ಪ್ರಸ್ತಾಪವು 2022 ರಲ್ಲಿ ಆರಂಭವಾಗಲಿದೆ ಎಂದಿದ್ದಾರೆ. * ಸರ್ಕಾರವು ಈ ಹಿಂದೆ 2019 ರಲ್ಲಿ ಎಲ್ಲಾ ಹೊಸ ಮನೆಗಳು ಪಾರ್ಕಿಂಗ್ ಸ್ಥಳದೊಂದಿಗೆ ಚಾರ್ಜ್ ಪಾಯಿಂಟ್ ಹೊಂದಿರಬೇಕು ಘೋಷಣೆ ಮಾಡಿತ್ತು. * ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು 2030 ಹೊತ್ತಿಗೆ ಗ್ಯಾಸೋಲಿನ್ ಚಾಲಿತ ವಾಹನಗಳ ಮಾರಾಟವನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದ್ದಾರೆ.