Job Description: * ಪ್ರಸ್ತುತ ಭಾರತದಲ್ಲಿನ ಸೋಲಾರ್ ಪಿವಿ ಮಾರಾಟ ಮತ್ತು ಮಾಡ್ಯೂಲ್ಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ. * ರಾಜ್ಯಗಳಿಗೆ ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಉದ್ಯೋಗಿಗಳಿಗೆ ತರಬೇತಿ ನೀಡಲು ಸೂಚಿಸಿದರು, ಇದಕ್ಕೆ 'ಸೂರ್ಯ ಮಿತ್ರಗಳ' ಯೋಜನೆಯ ಉದಾಹರಣೆಯನ್ನು ನೀಡಿದ್ದಾರೆ. * ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿನ ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ 2.4 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಅವರು ಉದ್ಘಾಟಣೆ ಮಾಡಿದರು. * ಪ್ರಸ್ತುತ ಭಾರತವು ತನ್ನ ಸೌರ ವಿದ್ಯುತ್ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ 5 ನೇ ಸ್ಥಾನದಲ್ಲಿದೆ.