Job Description: * ಪ್ರಸ್ತುತ ಸತತ 2 ವರ್ಷಗಳಿಗೊಮ್ಮೆ ನಡೆಯಲಿರುವ ಡೆಫ್ಎಕ್ಸ್ಪೋಸ್ನಲ್ಲಿ 'ಇಂಡಿಯಾ ಆಫ್ರಿಕಾ ಡಿಫೆನ್ಸ್ ಡೈಲಾಗ್ ನ್ನು ಸಂಘಟಿಸಲು ಭಾರತ ಪ್ರಸ್ತಾವನೆಯನ್ನು ನೀಡಿದೆ, ಹಾಗೂ ಆಫ್ರಿಕನ್ ದೇಶಗಳು ಮತ್ತು ಭಾರತದ ನಡುವೆ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. * ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ಅನಾಲಿಸಿಸ್ ಇಂಡಿಯಾ ಆಫ್ರಿಕಾ ಡಿಫೆನ್ಸ್ ಡೈಲಾಗ್'ನ ಜ್ಞಾನ ಪಾಲುದಾರರಾಗಲು ಭಾರತ ತೀರ್ಮಾನ ಕೈಗೊಂಡಿದೆ, ಇದರಿಂದ 2 ದೇಶಗಳ ನಡುವಿನ ರಕ್ಷಣಾ ವ್ಯಸ್ಥೆಗೆ ಅಗತ್ಯವಾಗಿರುವ ಬೆಂಬಲವನ್ನು ನೀಡುತ್ತದೆ. * ಭಾರತ -ಆಫ್ರಿಕಾ ರಕ್ಷಣಾ ಸಂವಾದದ ಮುಂದಿನ ಆವೃತ್ತಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಡೆಫ್ಎಕ್ಸ್ಪೋ'ನಲ್ಲಿ ಆಫ್ರಿಕನ್ ರಾಷ್ಟ್ರಗಳ ರಕ್ಷಣಾ ಮಂತ್ರಿಗಳನ್ನು ಆಯೋಜಿಸಲಿದ್ದಾರೆ. * 2022 ರ ಮಾರ್ಚ್ ನಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಈ ಡಿಫೆಕ್ಸ್ಪೋ ನಡೆಯಲಿದೆ. * 2020 ರ ಫೆಬ್ರವರಿ. 6 ರಂದು ಪ್ರಪ್ರಥಮ ಭಾರತ ಆಫ್ರಿಕಾ ರಕ್ಷಣಾ ಮಂತ್ರಿಗಳ ಸಮಾವೇಶವು ಉತ್ತರ ಪ್ರದೇಶದ ಲಕ್ನೋದಲ್ಲಿ ಡೆಫ್ ಎಕ್ಸ್ಪೋ ಜೊತೆಯಲ್ಲಿ ನಡೆಯಿತು. * ಭಾರತ-ಆಫ್ರಿಕಾ ಎರಡು ದೇಶಗಳ ನಡುವಿನ ರಕ್ಷಣಾ ಸಂಬಂಧಗಳ ಅಡಿಪಾಯವು 'ಸಾಗರ್' ಮತ್ತು 'ವಸುಧೈವ ಕುಟುಂಬಕಂ' ಎಂಬ ಎರಡು ಮಾರ್ಗದರ್ಶಿ ತತ್ವಗಳನ್ನು ಹೊಂದಿವೆ.