Job Description: * ಇ-ಕಾಮರ್ಸ್ ನ ದೈತ್ಯ ಅಮೆಜಾನ್ ದೇಶದಲ್ಲಿ ತನ್ನ ಅತಿದೊಡ್ಡ ಫುಲ್ಫಿಲ್ಮೆಂಟ್ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿದೆ, ಈ ಫುಲ್ಫಿಲ್ಮೆಂಟ್ ಕೇಂದ್ರವು 2.4 ಮಿಲಿಯನ್ ಕ್ಯೂಬಿಕ್ ಫೀಟ್ಗಿಂತಲೂ ಅಧಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ. * ಪ್ರಸ್ತುತ ಕರ್ನಾಟಕದಲ್ಲಿನ 42,000 ಕ್ಕೂ ಅಧಿಕ ಮಾರಾಟಗಾರರಿಗೆ ದೇಶಾದ್ಯಂತ ದೊಡ್ಡ ಗ್ರಾಹಕ ಬಳಗವನ್ನು ನೀಡುವ ನಿಟ್ಟಿನಲ್ಲಿ ಈ ಕೇಂದ್ರವನ್ನು ತರೆದಿದೆ. * ಪ್ರಸ್ತುತ ಅಮೆಜಾನ್ ಇಂಡಿಯಾ ಕಂಪನಿಯು ತನ್ನ 5 ಫುಲ್ಫಿಲ್ಮೆಂಟ್ ಕೇಂದ್ರಗಳಲ್ಲಿ 6.5 ಮಿಲಿಯನ್ ಕ್ಯೂಬಿಕ್ ಫೀಟ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.