Job Description: * 2022 ರ ಮೊದಲ ತ್ರೈಮಾಸಿಕದಿಂದ ಜೆಟ್ ಏರ್ವೇಸ್ ದೇಶೀಯ ವಿಮಾನಯಾನ ಸೌಲಭ್ಯಗಳನ್ನು ಪುನಃ ಆರಂಭಿಸಲಿವೆ. * ಪ್ರಸ್ತುತ ಏರ್ಲೈನ್ಸ್ ನ ಬಿಡ್ಡರ್ ವಿಜೇತ ಜಲನ್ ಕಲ್ರಾಕ್ ಒಕ್ಕೂಟವು, ಜೆಟ್ ಏರ್ವೇಸ್ ಸಂಸ್ಥೆಯ ಅಂತಾರಾಷ್ಟ್ರೀಯ ವಿಮಾನಗಳ ಸೇವೆಯು 2022 ರ ಕೊನೆಯ ತ್ರೈಮಾಸಿಕದಿಂದ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ. * ಪುನಃ ಆರಂಭವಾಗುವ ಜೆಟ್ ಏರ್ವೇಸ್ ಮೊದಲನೆಯದಾಗಿ ದೆಹಲಿ-ಮುಂಬೈ ಮಾರ್ಗವಾಗಿ ಆರಂಭವಾಗಲಿದೆ, ಇದಲ್ಲದೇ ಏರ್ ಲೈನ್ಸ್ ನ ಕೇಂದ್ರ ಕಚೇರಿ ಮುಂಬೈ ಯಿಂದ ದೆಹಲಿಗೆ ವರ್ಗಾವಣೆಯಾಗಲಿದೆ ಎಂದು ಏರ್ ಲೈನ್ಸ್ ಸಂಸ್ಥೆ ಮಾಹಿತಿ ನೀಡಿದೆ. * ಜೆಟ್ ಏರ್ವೇಸ್ 3 ವರ್ಷಗಳಲ್ಲಿ 50ಕ್ಕೂ ಅಧಿಕ ಏರ್ ಕ್ರಾಫ್ಟ್'ಗಳು ಮತ್ತು 5 ವರ್ಷಗಳಲ್ಲಿ 100 ಕ್ಕೂ ಅಧಿಕ ವಿಮಾನಗಳನ್ನು ಆರಂಭಿಸುವದಕ್ಕೆ ಜೆಟ್ ಏರ್ವೇಸ್ 2.0 ಯೋಜನೆ ಹೊಂದಿದೆ ಎಂದು ತಿಳಿಸಿದ್ದಾರೆ.