Job Description: * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಆರೋಗ್ಯ ಸೇವೆಗೆ ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕವಚ ಯೋಜನೆಯಡಿ 120 ಆಂಬುಲೆನ್ಸ್'ಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. * ಪ್ರಸ್ತುತ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆರೋಗ್ಯ ಕವಚ ಯೋಜನೆ ಅಡಿಯಲ್ಲಿ 710 ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ, ಹಾಗೂ ಲೋಕಾರ್ಪಣೆಗೊಂಡ ಈ 120 ಆಂಬ್ಯುಲೆನ್ಸ್ ಗಳು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ವ್ಯಸ್ಥೆಯನ್ನು ಹೊಂದಿವೆ ಎಂದಿದ್ದಾರೆ. * ಆರೋಗ್ಯ ಕವಚ ಸೇವೆಯು ಈ ಹಿಂದೆ 2008 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಅವಧಿಯಲ್ಲಿ ಆರಂಭವಾಗಿದೆ. * ಇದೀಗ ಪ್ರತಿ 1 ಲಕ್ಷ ಜನಸಂಖ್ಯೆಗೆ 1 ಆಂಬ್ಯುಲೆನ್ಸ್ ಮಾತ್ರ ಲಭ್ಯವಿದ್ದು, ಹಾಗೂ ಇನ್ನು ಮುಂದಿನ ದಿನಗಳಲ್ಲಿ 40-50 ಸಾವಿರ ಜನಸಂಖ್ಯೆಗೆ 1 ಆಂಬ್ಯುಲೆನ್ಸ್ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.