Job Description: * ಪ್ರಸ್ತುತ 2021ರ ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನು ಬಿಹಾರದ ಭಾಗಲ್ಪುರದ ಗಣಿತ ಶಿಕ್ಷಕ ಸತ್ಯಂ ಮಿಶ್ರ ಹಾಗೂ ಹೈದರಾಬಾದ್'ನ ಸಮಾಜ, ಇಂಗ್ಲಿಷ್ ಮತ್ತು ಗಣಿತ ಶಿಕ್ಷಕಿ ಮೇಘನಾ ಮುಸುನುರಿ ಅವರಿಗೆ ಲಭಿಸಿದೆ. * ಈ ಮೊದಲು ಗ್ಲೋಬಲ್ ಟೀಚರ್ ಪ್ರಶಸ್ತಿಯು ಮಹಾರಾಷ್ಟ್ರದ ರಂಜಿತ್ ಸಿನ್ಹಾ ದಿಸಳೆ ಅವರಿಗೆ ಲಭಿಸಿತ್ತು. * 2021 ನೇ ವರ್ಷದ 'ಗ್ಲೋಬಲ್ ಟೀಚರ್ ಪ್ರಶಸ್ತಿ' ಪಟ್ಟಿಯಲ್ಲಿನ 50 ಅಗ್ರ ಶಿಕ್ಷಕರಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. * ಈ 'ಗ್ಲೋಬಲ್ ಟೀಚರ್ ಪ್ರಶಸ್ತಿ'ಯನ್ನು ವಾರ್ಕಿ ಫೌಂಡೇಷನ್ ಯುನೆಸ್ಕೊ ಸಹಭಾಗಿತ್ವದಲ್ಲಿ ನೀಡಲಾಗುತ್ತದೆ, ಈ ಪ್ರಶಸ್ತಿಯ ಜತೆಗೆ 10 ಲಕ್ಷ ಡಾಲರ್ ನಗದು ಹೊಂದಿದೆ. * ಈ ಪ್ರಶಸ್ತಿಗೆ 121 ದೇಶಗಳಿಂದ 8,000 ಶಿಕ್ಷಕರು ನಾಮನಿರ್ದೇಶಗಳಾಗಿದ್ದವು. * ಇದಲ್ಲದೇ ಗ್ಲೋಬಲ್ ಸ್ಟೂಡೆಂಟ್ ಪ್ರಶಸ್ತಿಗೆ ಆಯ್ಕೆ ಯಾಗಿರುವ ಅಗ್ರ 50 ವಿದ್ಯಾರ್ಥಿಗಳ ಪಟ್ಟಿಯಲ್ಲಿ ನವದೆಹಲಿಯ ಆರ್ಕಿಟೆಕ್ಚರ್ ವಿದ್ಯಾರ್ಥಿ ಜಾಮಿಯಾ ಮಿಲಿಯಾ, ಅಹ್ಮದಾಬಾದ್ನ ಎಂಬಿಎ ವಿದ್ಯಾರ್ಥಿ ಆಯುಷ್ ಗುಪ್ತಾ, ಜಾರ್ಖಂಡ್ನ ವಿದ್ಯಾರ್ಥಿನಿ ಸೀಮಾ ಕುಮಾರಿ, ಮತ್ತು ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಪಿನ್ ಕುಮಾರ್ ಶರ್ಮಾ ಅಗ್ರ 50 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. * ನವೆಂಬರ್ ತಿಂಗಳಿನಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.