Job Description: * ಕೇಂದ್ರ ಹಣಕಾಸು ಸಚಿವಾಲಯದಿಂದ 17 ರಾಜ್ಯಗಳಿಗೆ 9,871 ಕೋಟಿ ರೂ.ಗಳನ್ನು ಅನುದಾನ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ. * ಪ್ರಸ್ತುತ ಸಂವಿಧಾನದ ಪರಿಚ್ಛೇದ 275ರ ಅಡಿಯಲ್ಲಿನ ಹಣಕಾಸು ವರ್ಷದಲ್ಲಿನ ಪಿಡಿಆರ್ಡಿ ಅನುದಾನವಾಗಿ ಅರ್ಹ ರಾಜ್ಯಗಳಿಗೆ ಒಟ್ಟು 59,226 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. * ಪ್ರಸ್ತುತ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 2021-22ರ ಅವಧಿಯಲ್ಲಿ 17 ರಾಜ್ಯಗಳ ಕಂದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಮಾಸಿಕ ಕಂತುಗಳಲ್ಲಿ ಅನುದಾನ ಬಿಡುಗಡೆ ನೀಡಲಾಗುತ್ತಿದೆ. * 15ನೇ ಹಣಕಾಸು ಆಯೋಗವು 2021-22 ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ.ಗಳ ಹಂಚಿಕೆ ಕಂದಾಯ ಕೊರತೆಯ ಅನುದಾನವನ್ನು ಶಿಫಾರಸು ಮಾಡಿದೆ, ಆದರೆ ಅದರಲ್ಲಿ ಇದೀಗ ರೂ. 59,226 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.