Job Description: * ಒಡಿಶಾ ರಾಜ್ಯದ ಮಲ್ಕನ್ಗಿರಿ ಮತ್ತು ನಬರಂಗ್ಪುರ ಪ್ರದೇಶದಲ್ಲಿ ಕಾಣಿಸಿಕೊಳ್ಳುವ 'ಮಂಡ ಎಮ್ಮ’ಗೆ ಸ್ವದೇಶಿ ತಳಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ, ಈ ಎಮ್ಮೆಗಳನ್ನು ನ್ಯಾಶನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಸ್ಥಳೀಯ ತಳಿ ಎಂದು ಘೋಷಣೆ ಮಾಡಿದೆ. * ಈ ಹಿಂದೆ 2019 ರಲ್ಲಿ ಒಡಿಶಾ ರಾಜ್ಯದ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯು, ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಮೀಕ್ಷೆಯನ್ನು ಕೈಗೊಂಡಿತ್ತು. * ಪ್ರಸ್ತುತ ಒಡಿಶಾದ ಮಲ್ಕಂಗಿರಿ ಮತ್ತು ನಬರಂಗಪುರ ಜಿಲ್ಲೆಗಳಲ್ಲಿ ಕೃಷಿ ಕಾರ್ಯಾಚರಣೆಯಲ್ಲಿ ಈ ಎಮ್ಮೆಗಳನ್ನು ಬಳಸುತ್ತಾರೆ. * ದೇಶದಲ್ಲಿ ಇದುವರೆಗೆ ಒಟ್ಟು 202 ತಳಿಗಳು ಮಾನ್ಯತೆ ಪಡೆದಿವೆ.