Job Description: * ಪ್ರಸ್ತುತ ಚೀನಾ ದೇಶವು ಭಾರತಕ್ಕೆ ಹೊಂದಿಕೊಂಡಿರುವ ಟಿಬೆಟ್ ಹಾಗೂ ಷಿಂಜಿಯಾಂಗ್ ಪ್ರದೇಶಗಳಲ್ಲಿ ಸರಿ ಸುಮಾರು 30 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಚೀನಾದ ಸುದ್ದಿ ವಾಹಿನಿಗಳು ವರದಿಯನ್ನು ಪ್ರಸಾರ ಮಾಡಿವೆ. * ಇತ್ತೀಚಿನ ದಿನಗಳಲ್ಲಿ ಚೀನಾ ದೇಶವು ಟಿಬೆಟ್ನಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ, ಹಾಗೂ ಕೆಲ ದಿನಗಳ ಹಿಂದೆ ಭಾರತದ ಅರುಣಾಚಲ ಪ್ರದೇಶದ ಸಮೀಪದಲ್ಲಿರುವ ಚೀನಾದ ನಿಯಿಂಗ್ಚಿಯನ್ನು ಪ್ರಾದೇಶಿಕ ರಾಜಧಾನಿ ಲಾಸಾಕ್ಕೆ ಬುಲೆಟ್ ರೈಲನ್ನು ಆರಂಭಿಸಿದೆ. * ಪ್ರಸ್ತುತ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಗಡಿ ಪ್ರದೇಶಗಳಲ್ಲಿ ನಾಗರಿಕ ವಿಮಾನಯಾನದ ಅಭಿವೃದ್ಧಿಯು ವಾಯು ಸಾರಿಗೆಗೆ ಅನುಕೂಲ ನೀಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಚೀನಾದ ಪಿಎಲ್ಎ'ನ ಭಾಗವಾಗಿರುವ "ವೆಸ್ಟರ್ನ್ ಥಿಯೇಟರ್ ಕಮಾಂಡ್" ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಭಾರತದೊಂದಿಗಿನ ಗಡಿ ಪ್ರದೇಶದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.