Job Description: * ಪ್ರಸ್ತುತ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ನೀಡಿರುವ ಮಾಹಿತಿಯ ಪ್ರಕಾರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರಗಿಯ ವಿಮಾನ ನಿಲ್ದಾಣಗಳಲ್ಲಿ ತಲಾ ಎರಡು ಹೊಸ ಪೈಲಟ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಗುವದು ಎಂದು ತಿಳಿಸಿದ್ದಾರೆ. * ಈ ಹೊಸ ಪೈಲಟ್ ತರಬೇತಿ ಕೇಂದ್ರಗಳನ್ನು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಮುಂಬರುವ 100 ದಿನಗಳಲ್ಲಿ ದೇಶದ '5' ವಿಮಾನ ನಿಲ್ದಾಣಗಳು, ಹಾಗೂ '6' ಹೆಲಿಪ್ಯಾಡ್ಗಳು, ಅಲ್ಲದೇ '50'ವಾಯು ಮಾರ್ಗಗಳನ್ನು ಜನಸೇವೆಗೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.