Job Description: * ಪ್ರಸ್ತುತ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ರಾಜಸ್ಥಾನದ ಬರ್ಮಾರ್ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 925 ಎ ಯಲ್ಲಿ ನಿರ್ಮಿಸಲಾಗಿರುವ ತುರ್ತು ವಿಮಾನ ಭೂಸ್ಪರ್ಶ ನೆಲೆಯನ್ನು ಉದ್ಘಾಟಣೆ ಮಾಡಲಿದ್ದಾರೆ. * ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 3 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದೆ. * ಪ್ರಸ್ತುತ ಭಾರತಮಾಲಾ ಪರಿಯೋಜನೆಯ ಅಡಿಯಲ್ಲಿ ಸುಮಾರು 765.52 ಕೋಟಿ ರೂ. ವೆಚ್ಚದಲ್ಲಿ ಒಟ್ಟು 196.97 ಕಿ.ಮೀ. ಉದ್ದನೇಯ ದ್ವಿಪಥದ ರಸ್ತೆಯನ್ನು ಗಗರಿಯಾ-ಭಕಾಸರ್ ಹಾಗೂ ಸತ್ತ-ಗಾಂಧವ್ ವಿಭಾಗದ ನಿರ್ಮಾಣ ಮಾಡಲಾಗಿದೆ, ಇದೇ ರಸ್ತೆಯಲ್ಲಿ ತುರ್ತು ವಿಮಾನ ಭೂಸ್ಪರ್ಶ ಸೌಲಭ್ಯವನ್ನು ಹೊಂದಿದೆ. * ದೇಶದ ಪಶ್ಚಿಮ ಭಾಗದ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ವಾಯುಪಡೆ ಸೇನೆಗ ಅಗತ್ಯವಿರುವ ಕುಂದನಪುರ, ಸಿಂಘಾನಿಯಾ ಮತ್ತು ಭಕಾಸರ್ ಗ್ರಾಮಗಳಲ್ಲಿ 3 ಹೆಲಿಪ್ಯಾಡ್ಗಳನ್ನು ನಿರ್ಮಾಣ ಮಾಡಲಾಗಿದೆ, ಇವುಗಳಿಂದ ಭಾರತೀಯ ಸೇನೆ ಬಲ ಬಂದಂತಾಗಿದೆ.