Job Description: * ಅಮೆಜಾನ್ ಪೇ ಇಂಡಿಯಾ ತನ್ನ ಗ್ರಾಹಕರಿಗೆ ಮ್ಯೂಚುವಲ್ ಫಂಡ್ ಮತ್ತು ನಿಶ್ಚಿತ ಠೇವಣಿಗಳಲ್ಲಿ (FD) ಹೂಡಿಕೆ ಮಾಡುವ ಸೇವೆ ಒದಗಿಸಲು ಸಿದ್ಧವಾಗಿದೆ. * ಇತ್ತೀಚಿಗೆ 'ಗೂಗಲ್ ಪೇ' ಈ ಬಗೆಯ ಸೌಲಭ್ಯಕ್ಕೆ ಚಾಲನೆಯನ್ನು ನೀಡಿದೆ, ಇದೀಗ ಅಮೆಜಾನ್ ಪೇ ಕೂಡ ಈ ಸೌಲಭ್ಯಗಳನ್ನೂ ನಿರ್ಧಾರವನ್ನು ಕೈಗೊಂಡಿದೆ. * ಪ್ರಸ್ತುತ 'ಅಮೆಜಾನ್ ಪೇ' ಇಂಡಿಯಾ ಹೂಡಿಕೆ ಪ್ಲಾಟ್ಫಾರ್ಮ್ ಕುವೇರಾ (Kuvera.in) ಜೊತೆ ಒಪ್ಪಂದವನ್ನು ಮಾಡಿಕೊಳ್ಳಲಿದೆ ಎಂದು ಘೋಷಣೆ ಮಾಡಿದೆ, ಅಲ್ಲದೇ ಇದೀಗ ನಮ್ಮ ಗ್ರಾಹಕರು ಈ ಮ್ಯೂಚುವಲ್ ಫಂಡ್ ಮತ್ತು ಎಫ್.ಡಿ.ಗಳಲ್ಲಿ ಹೂಡಿಕೆ ಮಾಡಬಹುದು ಎಂದು ತಿಳಿಸಿದೆ. * ಪ್ರಸ್ತುತ 'ಗೂಗಲ್ ಪೇ' ಸಂಸ್ಥೆಯು ಠೇವಣಿ ಆಯ್ಕೆಯನ್ನು ಒದಗಿಸಲು ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದೆ, ಆದರೆ ಅಮೆಜಾನ್ ಪೇ ಈ ಯಾವುದೇ ಮಾಹಿತಿ ನೀಡಿಲ್ಲ.