Job Description: * ಪ್ರಸ್ತುತ ಕೇಂದ್ರ ಪರಿಸರ ಸಚಿವರಾದ ಭೂಪೇಂದ್ರ ಯಾದವ್ ಅವರು ಪ್ರಾಣ(PRANA) ಎಂಬ ಪೋರ್ಟಲ್ ನ್ನು ಆರಂಭಿಸಿದ್ದಾರೆ. * ಪ್ರಸ್ತುತ ಎಲ್ಲ ಜನರಿಗೆ ಶುದ್ಧ ಗಾಳಿ ಹಾಗೂ ನೀಲಿ ಆಕಾಶವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ ಪ್ರಗತಿಯನ್ನು ಪತ್ತೆ ಹಚ್ಚಲು ಈ ಪ್ರಾಣ ಜಾಲತಾಣವನ್ನು ಬಳಕೆ ಮಾಡಲಾಗುತ್ತದೆ. * ಈ ಜಾಲತಾಣವನ್ನು ಅಂತರರಾಷ್ಟ್ರೀಯ ಶುದ್ಧ ಗಾಳಿಯ ದಿನದಂದು ಆರಂಭಿಸಿದ್ದಾರೆ. * ಈ ಹಿಂದೆ 2019 ರಲ್ಲಿ ಭಾರತದ 86 ನಗರಗಳು ಉತ್ತಮ ವಾಯು ಗುಣಮಟ್ಟವನ್ನು ತೋರಿಸಿದ್ದವು, ಹಾಗೇ 2020 ರಲ್ಲಿ 104 ನಗರಗಳು ಉತ್ತಮ ವಾಯು ಗುಣಮಟ್ಟವನ್ನು ತೋರಿಸಿವೆ. * ಭಾರತ ದೇಶವು ಸುಮಾರು 132 ಎನ್ಎಸಿ/ಮಿಲಿಯನ್ ಪ್ಲಸ್ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನಗರ-ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. * ಈ ಪ್ರಾಣ ಪೋರ್ಟಲ್ ನಗರ-ನಿರ್ದಿಷ್ಟ ಕ್ರಿಯಾ ಯೋಜನೆಯ ಭೌತಿಕ ಹಾಗೂ ಆರ್ಥಿಕ ಸ್ಥಿತಿ ಗತಿಯನ್ನು ತಿಳಿಸಲು ಸಹಾಯ ಮಾಡುತ್ತದೆ, ಅಲ್ಲದೇ ಸಾರ್ವಜನಿಕರಿಗೆ ಗಾಳಿಯ ಗುಣಮಟ್ಟದ ಮಾಹಿತಿಯನ್ನು ನೀಡುತ್ತದೆ.