Job Description: * ಈ ಹಿಂದೆ ISRO 2019 ರಲ್ಲಿ 'ಚಂದ್ರಯಾನ-2' ಯೋಜನೆಯ ಆರ್ಬಿಟರ್ ನ್ನು ಬಾಹ್ಯಾಕಾಶಕ್ಕೆ ಕಳುಸಿತ್ತು, ಇದೀಗ ಆ ಆರ್ಬಿಟರ್ ಇಲ್ಲಿಯತನಕ ಸುಮಾರು 9,000 ಕ್ಕೂ ಹೆಚ್ಚು ಬಾರಿ ಚಂದ್ರನನ್ನು ಸುತ್ತಿದೆ, ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಮಾಹಿತಿಯನ್ನು ನೀಡಿದ್ದಾರೆ. * ಇಸ್ರೋ ಬಾಹ್ಯಾಕಾಶಕ್ಕೆ ಕಳುಸಿರುವ ಈ ಚಂದ್ರಯಾನ-2 ಯೋಜನೆಯು ಎರಡು ವರ್ಷವನ್ನು ಪೂರೈಸಿದೆ, ಈ ಕಾರಣದಿಂದಾಗಿ ಇಸ್ರೋ ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿತ್ತು ಆ ಸಂದರ್ಭದಲ್ಲಿ ಅಧ್ಯಕ್ಷ ಕೆ. ಶಿವನ್ ಅವರು ಮಾಹಿತಿ ನೀಡಿದ್ದಾರೆ. * ಈ ಆರ್ಬಿಟರ್ನಲ್ಲಿನ 8 ಪರಿಕರಗಳು ಚಂದ್ರನ ಮೇಲ್ಮೈ ನಿಂದ ಅಂದಾಜು 100 ಕಿ.ಮೀ. ದೂರದಲ್ಲಿ ಚಂದ್ರನ ಮೇಲ್ಮೈ ಯನ್ನು ಸತತವಾಗಿ ವೀಕ್ಷಣೆಯನ್ನು ಮಾಡುತ್ತಿವೆ ಎಂದು ತಿಳಿಸಿದ್ದಾರೆ.