Job Description: * ಪ್ರಸ್ತುತ ಬ್ರೆಝಿಲ್ ದೇಶದಲ್ಲಿನ ಹಸುಗಳಿಗೆ ಹುಚ್ಚು ರೋಗದ ದೃಢಪಟ್ಟಿದೆ, ಈ ಕಾರಣದಿಂದಾಗಿ ತಕ್ಷಣದಿಂದಲೇ ಚೀನಾ ದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಷೇದ ಮಾಡಲಾಗಿದೆ ಎಂದು ಬ್ರೆಝಿಲ್'ನ ಕೃಷಿ ಇಲಾಖೆ ಮಾಹಿತಿ ನೀಡಿದೆ. * ಪ್ರಸ್ತುತ ಬ್ರೆಝಿಲ್ ನ ಮಿನಾಸ್ ಗೆರಾಯ್ಸ ಹಾಗೂ ಮಟೊ ಗ್ರೋಸೊ ರಾಜ್ಯಗಳಲ್ಲಿನ ಜನರು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ಬೊವೈನ್ ಸ್ಪಾಂಗಿಫಾರ್ಮ್ ಎನ್ಸೆಫಲೋಪಥಿ(ಬಿಎಸ್ಇ) ಎಂಬ ರೋಗದ ಪ್ರಕರಣ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. * ಈ ಹಿಂದೆ 1980 ರ ದಶಕದಲ್ಲಿ ಬ್ರಿಟನ್ನಲ್ಲಿ ಮೊದಲ ಬಾರಿಗೆ ಈ ಹುಚ್ಚು ಹಸು ರೋಗ ಪತ್ತೆಯಾಗಿತ್ತು, ನಂತರ ಯುರೋಪ್ ನ ಮೂಲಕ ವಿಶ್ವದೆಲ್ಲೆಡೆ ಹರಡಿತ್ತು. * ಈ ಹುಚ್ಚು ರೋಗವು ಮೃತಪಟ್ಟ ಜಾನುವಾರುಗಳ ಮಾಂಸವನ್ನು ಬಳಸಿಕೊಂಡು ತಯಾರಿಸಿದ ಪಶು ಆಹಾರವನ್ನು ಸೇವನೆ ಮಾಡುವ ಇತರ ಹಸುಗಳಿಗೆ ಈ ರೋಗ ಹರಡುತ್ತದೆ. * ಈ ಸೋಂಕು ತಗುಲಿರುವ ಗೋಮಾಂಸ ಸೇವನೆಯಿಂದ ಮನುಷ್ಯರು ಮೃತರಾಗುತ್ತಾರೆ. * ಪ್ರಸ್ತುತ ವಿಶ್ವದಲ್ಲಿ ಅತ್ಯಧಿಕ ಗೋಮಾಂಸ ರಫ್ತು ಮಾಡುವ ದೇಶ ಬ್ರೆಝಿಲ್, ಚೀನಾ ದೇಶವು ಬ್ರೆಝಿಲ್ ಗೋಮಾಂಸ ಬೇಡಿಕೆಯ ಬೃಹತ್ ಗ್ರಾಹಕ ದೇಶವಾಗಿದೆ. * ಪ್ರಸ್ತುತ ಬ್ರೆಝಿಲ್ ನಲ್ಲಿನ 50% ಕ್ಕೂ ಹೆಚ್ಚು ಗೋಮಾಂಸ ಚೀನಾ ಮತ್ತು ಹಾಂಕಾಂಗ್ ರಾಷ್ಟ್ರಗಳಿಗೆ ರಫ್ತಾಗುತ್ತದೆ.