Job Description: * ಪ್ರಸ್ತುತ ಮ್ಯಾನ್ಮಾರ್ನ ಸೇನಾ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ದಂಗೆಗೆ ಸಿದ್ಧವಾಗುವಂತೆ 'ನ್ಯಾಷನಲ್ ಯೂನಿಟಿ ಗವರ್ನ್ಮೆಂಟ್' ಕರೆ ನೀಡಿದೆ. * ನ್ಯಾಷನಲ್ ಯೂನಿಟಿ ಗವರ್ನ್ಮೆಂಟ್ ಈ ಸೇನಾ ಸರ್ಕಾರದ ವಿರುದ್ಧ ದೇಶದಲ್ಲಿನ ಪ್ರತಿ ಗ್ರಾಮ, ಪಟ್ಟಣ, ನಗರದಲ್ಲಿ ಒಂದೇ ಸಮಯದಲ್ಲಿ ದಂಗೆ ಏಳಬೇಕು ಎಂದು ಎನ್ಯುಜಿ ಹಂಗಾಮಿ ಅಧ್ಯಕ್ಷ ದುವಾ ಲಶಿ ಲಾ ಅವರು ಕರೆ ನೀಡಿದ್ದಾರೆ, ಅಲ್ಲದೇ ಇದು ಒಂದು ಜನರ ಕ್ರಾಂತಿಯಾಗಿದೆ, ಇದಕ್ಕೆ ಎಲ್ಲಾ ಸೈನಿಕರು ಹಾಗೂ ಪೊಲೀಸರು 'ಪೀಪಲ್ಸ್ ಡಿಫೆನ್ಸ್ ಪೋರ್ಸ್ನೊಂದಿಗೆ ಕೈಜೋಡಿಸಬೇಕು ಎಂದು ದುವಾ ಲಶಿ ಅವರು ತಿಳಿಸಿದ್ದಾರೆ, ಹಾಗೂ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. * ಪ್ರಸ್ತುತ ದೇಶದಲ್ಲಿನ ಸನ್ನಿವೇಶಗಳನ್ನು ಪರಿಗಣಿಸಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ' ಎಂದು ಛಾಯಾ ಸರ್ಕಾರದ ಪ್ರಧಾನಿ ಮಹನ್ ವಿನ್ ಖೈಂಗ್ ಥನ್ ಅವರು ಹೇಳಿಕೆ ನೀಡಿದ್ದಾರೆ. * ಮ್ಯಾನ್ಮಾರ್ ಸೇನೆಯು ಫೆಬ್ರುವರಿ 1ರಂದು ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.