Job Description: * ಪ್ರಸ್ತುತ ಕರ್ನಾಟಕ ರಾಜ್ಯ ಹೈಕೋರ್ಟ್ ಇನ್ನು ಮುಂದೆ ರಾಜ್ಯಾದ್ಯಂತ ಇರುವ ರಸ್ತೆಗಳಲ್ಲಿ ಪ್ರತಿಮೆಗಳ ಸ್ಥಾಪನೆ ಮಾಡಲು ನಿರ್ಬಂಧಕ್ಕೆ ಆದೇಶವನ್ನು ನೀಡಿದೆ, ಅಲ್ಲದೇ ಇದು ಸುಪ್ರೀಂಕೋರ್ಟ್ ಆದೇಶ ಆಧರಿಸಿ ಹೈಕೋರ್ಟ್ನ ಸೂಚನೆಯಾಗಿದೆ ಎಂದು ತಿಳಿಸಿದೆ. * ಇತ್ತೀಚಿಗೆ ರಾಜ್ಯದ ಸಾಂಸ್ಕೃತಿಕ ನಗರ ಮೈಸೂರಿನ ಗನ್ ಹೌಸ್ ಸರ್ಕಲ್ನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಪ್ರತಿಮೆ ಸ್ಥಾಪನೆಯ ಕುರಿತು ಕ್ಷತ್ರಿಯ ಮಹಾಸಭಾ ಪ್ರಶ್ನಿಸಿ ಪಿಐಎಲ್ ಸಲ್ಲಿಕೆ ಮಾಡಿತ್ತು, ಈ ವಿಷಯದ ಕುರಿತು ವಿಚಾರಣೆ ನಡೆಸಿರುವ ಹೈಕೋರ್ಟ್ ಇದೀಗ ರಾಜ್ಯಾದ್ಯಂತ ರಸ್ತೆಗಳಲ್ಲಿ ಪ್ರತಿಮೆಗಳ ಸ್ಥಾಪನೆಯ ನಿರ್ಬಂಧಕ್ಕೆ ಆದೇಶವನ್ನು ಹೊರಡಿಸಿದೆ. * ಸಾಂಸ್ಕೃತಿಕ ನಗರ ಮೈಸೂರಿನ ಗನ್ ಹೌಸ್ ಸರ್ಕಲ್ ರಸ್ತೆಯ ಮಧ್ಯದಲ್ಲಿ ಪ್ರತಿಮೆ ಸ್ಥಾಪನೆಗೆ ಸರ್ಕಾರ, ಮೈಸೂರು ಪಾಲಿಕೆ ಒಪ್ಪಿಗೆಯನ್ನು ನೀಡಿವೆ, ಆದರೆ ಇದಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ, ಅಲ್ಲದೇ ಯಾವುದೇ ಅನುಮತಿ ನೀಡದಂತೆ ಸರ್ಕಾರಗಳಿಗೆ ಆದೇಶಿಸಿದೆ.