Job Description: * ಪ್ರಸ್ತುತ ನವದೆಹಲಿಯಲ್ಲಿನ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಪಶು ಸಂಗೋಪನೆ ವಿಭಾಗವು ಕರ್ನಾಟಕ ರಾಜ್ಯದ ಧಾರವಾಡ ನಗರದ 'ಧಾರವಾಡಿ ತಳಿ' ಎಮ್ಮೆಗೆ ತಳಿಗೆ ರಾಷ್ಟ್ರೀಯ ಮಾನ್ಯತೆ ದೊರೆತಿದೆ. * ಪ್ರಸ್ತುತ 'ಧಾರವಾಡಿ ಎಮ್ಮೆ ತಳಿಗೆ' 'ಇಂಡಿಯಾ_ಬಫೆಲೊ_0800_ಧಾರವಾಡಿ_01018' ಎಂದು ತಳಿ ಪ್ರವೇಶ ಸಂಖ್ಯೆಯನ್ನು ನೀಡಲಾಗಿದೆ, ಮಾನ್ಯತೆ ಪಡೆದ ರಾಜ್ಯದ ಮೊದಲ ಎಮ್ಮೆ ತಳಿ ಇದಾಗಿದೆ. * ಪ್ರಸ್ತುತ 1970 ರಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗವು 'ಧಾರವಾಡಿ ಎಮ್ಮೆ ತಳಿಗೆ' ಮಾನ್ಯತೆ ಪಡೆಯಲು ಪ್ರಯತ್ನವನ್ನು ಪಡುತಿತ್ತು. * ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಅಂಗ ಸಂಸ್ಥೆಯಾಗಿರುವ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆ ರಾಷ್ಟ್ರೀಯ ಸಂಸ್ಥೆ ಮತ್ತು ಕೃಷಿ ವಿ.ವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸಂಶೋಧನೆ ನಡೆಸಲಾಗಿತ್ತು, 2017 ರಲ್ಲಿ ಈ ತಳಿ ಶುದ್ಧತೆ ವಿಷಯದ ಬಗೆಗಿನ ಸಂಶೋಧಕರು ಪರಿಷತ್ಗೆ ವರದಿ ಸಲ್ಲಿಸಲಾಗಿತ್ತು. * ಪ್ರಸ್ತುತ ದೇಶದ 18 ಎಮ್ಮೆ ತಳಿಯ ಸಾಲಿಗೆ 'ಧಾರವಾಡಿ' ಎಮ್ಮೆ ತಳಿಯು ಹೊಸದಾಗಿ ಸೇರ್ಪಡೆಯಾಗಿದೆ, ಎಂದು ಈ ತಳಿಯ ಸಂಶೋಧನೆಯನ್ನು ನಡೆಸಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಾಣಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ವಿ.ಎಸ್.ಕುಲಕರ್ಣಿ ಮಾಹಿತಿಯನ್ನು ನೀಡಿದ್ದಾರೆ.