Job Description: * ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಆಗಸ್ಟ್ ತಿಂಗಳ ಆಟಗಾರ ಪ್ರಶಸ್ತಿಯನ್ನು ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಪಡೆದುಕೊಂಡಿದ್ದಾರೆ. * ಪ್ರಸ್ತುತ ಜಸ್ಪ್ರೀತ್ ಬೂಮ್ರಾ ಅವರು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರಿಂದ ಈ ತಿಂಗಳ ಆಟಗಾರ ಪ್ರಶಸ್ತಿ ಇವರಿಗೆ ಲಭಿಸಿದೆ. * ಪುರುಷರ ವಿಭಾಗದ ತಿಂಗಳ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮತ್ತು ಪಾಕಿಸ್ತಾನದ ವೇಗಿ ಶಹೀನ್ ಅಫ್ರಿದಿ ಕೂಡ ಇದ್ದಾರೆ. * ಮಹಿಳೆಯರ ವಿಭಾಗದ ತಿಂಗಳ ಆಟಗಾರರ ಪಟ್ಟಿಯಲ್ಲಿ ಥಾಯ್ಲೆಂಡ್ನ ನಟಾಯ ಬೂಚಥಾಮ್ ಹಾಗೂ ಐರ್ಲೆಂಡ್ನ ಗ್ಯಾಬಿ ಲ್ಯೂಯಿಸ್ ಮತ್ತು ಎಮಿಯರ್ ರಿಚರ್ಡ್ಸನ್ ಸ್ಥಾನ ಪಡೆದುಕೊಂಡಿದ್ದಾರೆ. * ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ನಲ್ಲಿ ಬೂಮ್ರಾ 9 ವಿಕೆಟ್ ಪಡೆದಿದ್ದಾರೆ. * ಜೋ ರೂಟ್ ಆಗಸ್ಟ್ನಲ್ಲಿ ನಡೆದ ಭಾರತ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ 3 ಶತಕಗಳನ್ನು ಸಿಡಿಸಿದ್ದಾರೆ. * ಪಾಕಿಸ್ತಾನದ ಶಹೀನ್ ಅಫ್ರಿದಿ ಅವರು ವೆಸ್ಟ್ ಇಂಡೀಸ್ ವಿರುದ್ದದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 18 ವಿಕೆಟ್ ಪಡೆದುಕೊಂಡಿದ್ದಾರೆ, ಈ ಕಾರಣಕ್ಕಾಗಿ ಇವರಿಗೆ ICC ತಿಂಗಳ ಆಟಗಾರ ಪ್ರಶಸ್ತಿ ಲಭಿಸಿದೆ.