Job Description: * ಪ್ರಸ್ತುತ ಕೆನಡಾದ ಬರ್ನಾಬಿ ನಗರವು ಸೆಪ್ಟೆಂಬರ್ 5 ನ್ನು 'ಗೌರಿ ಲಂಕೇಶ್ ದಿನ' ಎಂದು ಘೋಷಣೆ ಮಾಡಿದೆ, ಪತ್ರಕರ್ತೆ ಗೌರಿ ಲಂಕೇಶ್ ರ ಕೊಲೆಯಾಗಿ ಸೆಪ್ಟೆಂಬರ್ 5 ಕ್ಕೆ ನಾಲ್ಕು ವರ್ಷ ಪೂರೈಸಲಿದೆ. * ಗೌರಿ ಲಂಕೇಶ್ ಅವರು 2017 ರ ಸೆಪ್ಟೆಂಬರ್ 5 ರಂದು ದುಷ್ಕರ್ಮಿಗಳಿಂದ ಬೆಂಗಳೂರಿನ ತಮ್ಮ ನಿವಾಸದ ಬಳಿಯೇ ಕೊಲೆಯಾಗಿದ್ದರು. * ಕೆನಡಾದ ಬರ್ನಾಬಿ ನಗರವು ಆಗಸ್ಟ್ 30 ನಡೆದ ಕೌನ್ಸಿಲ್ ಸಭೆಯಲ್ಲಿ ಮುಂಬರುವ ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ದಿನ ಎಂದು ಆಚರಿಸಲು ನಿರ್ಧಾರವನ್ನು ಕೈಗೊಂಡಿದೆ. * ಬರ್ನಾಬಿ ನಗರದ ಈ ನಿರ್ಧಾರಕ್ಕೆ ನಗರದ ಮೇಯರ್ ಮೈಕ್ ಹರ್ಲೆ ಸಹಿ ಹಾಕಿ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದಾರೆ. * ಕೆನಡಾದ ಬರ್ನಾತ್ ನಗರವು 2020 ರ ಎಪ್ರಿಲ್ 14 ರಂದು ಡಾ. ಬಿ ಆರ್ ಅಂಬೇಡ್ಕರ್ ದಿನವಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಂಡು ಆಚರಿಸಿದೆ.