Job Description: * ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಲಡಾಖ್ ನಲ್ಲಿ ಉದ್ಘಾಟನೆ ಮಾಡಲಾಗಿದೆ, ಈ ರಸ್ತೆಯು ಲೇಹ್ ನಿಂದ ಪಂಗೊಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. * ಪ್ರಸ್ತುತ ಈ ರಸ್ತೆಯುನ್ನು ಲಡಾಖ್ ಸಂಸದ ಜಮ್ಯಾಂಗ್ ಟ್ಸೆರಿಂಗ್ ನಮಗ್ಯಾಲ್ ಅವರು ಉದ್ಘಾಟಿಸಿದ್ದಾರೆ, ಈ ರಸ್ತೆಯು ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗವಾಗಿದೆ, ಹಾಗೂ ಇದು ಸುಮಾರು 18,600 ಅಡಿ ಎತ್ತರದ ಕೆಲ ಪಾಸ್ ಮೂಲಕ ಹಾದುಹೋಗುವ ರಸ್ತೆಯಾಗಿದೆ ಎಂದಿದ್ದಾರೆ. * ಈ ರಸ್ತೆಯುನ್ನು ಭಾರತೀಯ ಸೇನೆಯ 58 ಎಂಜಿನಿಯರ್ ರೆಜಿಮೆಂಟ್ ನಿರ್ಮಾಣ ಮಾಡಿದೆ, ಈ ರಸ್ತೆಯ ಮಾರ್ಗವು ಲೇಹ್ ನಿಂದ ಪಾಂಗೊಂಗ್ ಸರೋವರದವರೆಗಿನ 41 ಕಿಮೀ ಪ್ರಯಾಣವನ್ನು ಕಡಿಮೆ ಮಾಡಲಿದೆ ಎಂದು ತಿಳಿಸಿದ್ದಾರೆ. * ಸುಮಾರು 18,600 ಅಡಿ ಎತ್ತರದ ಈ ರಸ್ತೆಯು ವಿಶ್ವದ ಅತಿ ಎತ್ತರದ ಮೋಟರ್ ರಸ್ತೆಯ ಮಾರ್ಗವಾಗಿದೆ. * ಪ್ರಸ್ತುತ ಉದ್ಘಾಟನೆಗೊಂಡ ಈ ರಸ್ತೆಕಿಂತಲೂ ಮೊದಲು, ಖರ್ದುಂಗ್ಲಾ ಪಾಸ್ ಎಂಬ 18,380 ಅಡಿ ರಸ್ತೆಯು ವಿಶ್ವದ ಅತಿ ಎತ್ತರದ ಮೋಟರ್ ರಸ್ತೆಯಾಗಿತ್ತು.