Job Description: * ಪ್ರಸ್ತುತ ಭಾರತೀಯ ರೈಲ್ವೇಸ್ 58 ವಂದೇ ಭಾರತ್ ರೈಲು ಸೆಟ್ ಗಳಿಗೆ ಟೆಂಡರ್ ಕರೆದಿದೆ. * ಈ ಹಿಂದೆ ಆಗಸ್ಟ್. 15 ರಂದು ಪ್ರಧಾನಿ ಮೋದಿ ಅವರು ತಿಳಿಸಿರುವ ಪ್ರಕಾರ ಅಜಾದಿ ಕಾ ಅಮೃತ್ ಮಹೋತ್ಸವದ 75 ವಾರಗಳಲ್ಲಿ 75 ರೈಲುಗಳನ್ನು ಚಲಾಯಿಸಲು ಟೆಂಡರ್ ಕರೆಯಲಾಗಿದೆ. * ಈ ಭಾರತೀಯ ರೈಲ್ವೇಸ್ ಟೆಂಡರ್ ಪ್ರಕಾರ 2024 ರ ಮಾರ್ಚ್ ವೇಳೆಗೆ 102 ವಂದೇ ಭಾರತ್ ರೈಲುಗಳನ್ನು ರೈಲ್ವೇಗೆ ನೀಡಲಾಗುತ್ತದೆ, ಈ 102 ವಂದೇ ಭಾರತ್ ರೈಲುಗಳ ಪೈಕಿ 75 ರೈಲುಗಳು 2022 ರ ಆಗಸ್ಟ್. 15 ರೊಳಗೆ ಭಾರತೀಯ ರೈಲ್ವೇಗೆ ನೀಡಲಾಗುತ್ತದೆ. * ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು, ಭಾರತೀಯ ಸೆಮಿ-ಹೈಸ್ಪೀಡ್, ಇಂಟೆರ್'ಸಿಟಿ ಇಎಂಯು ರೈಲನ್ನು "ಟ್ರೈನ್ 18' ಎಂದು ಕರೆಯಲಾಗುತ್ತದೆ, ಹಾಗೂ ಈ ರೈಲುಗಳು ತಮಿಳುನಾಡು ರಾಜ್ಯದ ಚೆನ್ನೈನ ಪೆರಂಬೂರಿನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. * 2019 ರ ಫೆಬ್ರವರಿ. 15 ರಂದು ರೈಲು 18 ನ್ನು ಪ್ರಾರಂಭಿಸಲಾಗಿದೆ, ಇದಕ್ಕೆ 2019 ರ ಜನೇವರಿ. 27 ರಂದು 'ವಂದೇ ಭಾರತ್ ಎಕ್ಸ್ಪ್ರೆಸ್' ಎಂದು ಹೆಸರು ಇಡಲಾಗಿದೆ. * ಪ್ರಸ್ತುತ ಈ 'ರೈಲು 18' ಗಳು ಗರಿಷ್ಠ 200 ಕಿಮೀ/ಗಂ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ, ಆದರೆ ಈಗಿರುವ ಟ್ರ್ಯಾಕ್ಗಳು ಈ ವೇಗವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ, ಈ ಕಾರಣದಿಂದ ಈ ರೈಲುಗಳು 130 ಕಿಮೀ/ಗಂ ಗರಿಷ್ಠ ವೇಗದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಲಿವೆ. * ಈ 'ಟ್ರೈನ್ 18' ಭಾರತದಲ್ಲಿ ಅತಿ ವೇಗವಾಗಿ ಚಲಿಸುವ ರೈಲು ಎಂಬ ಕೀರ್ತಿಗೆ ಪಾತ್ರವಾಗಿವೆ.