Job Description: * 2021 ರ ಆಗಸ್ಟ್. 29 ರಂದು ಕೇಂದ್ರ ಆಯುಷ್ ಸಚಿವಾಲಯವು ವಿಜ್ಞಾನ ಭವನದಿಂದ ವೈ-ಬ್ರೇಕ್ ಆಪ್ ನ್ನು ಬಿಡುಗಡೆ ಮಾಡಿದೆ. * ಈ ಆಪ್ ನ್ನು ಕೇಂದ್ರ ಆಯುಷ್ ಸಚಿವರಾಗಿರುವ ಸರ್ಬಾನಂದ ಸೋನೊವಾಲ್ ಆರಂಭಿಸಿದರು. * ಆಯುಷ್ ಸಚಿವಾಲಯವು ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥವಾಗಿ ಈ ಅಭಿಯಾನವನ್ನು ಪ್ರಾರಂಭಿಸಿದೆ. * ಕೇಂದ್ರ ಆಯುಷ್ ಸಚಿವಾಲಯವು ಈ ವೈ-ಬ್ರೇಕ್ ಆಪ್ ಅಲ್ಲದೇ ಕೃಷಿ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿ, ಮನೆಗಳಿಗೆ ಔಷಧೀಯ ಸಸ್ಯಗಳ ವಿತರಣೆ ಹಾಗೂ ಶಾಲಾ ಮತ್ತು ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂವೇದನೆಯಂತಹ ಒಂದು ವರ್ಷದ ಅಭಿಯಾನವನ್ನು ಈ ಆಯುಷ್ ವ್ಯವಸ್ಥೆಯಲ್ಲಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ಆಯುಷ್ ಸಚಿವಾಲಯವು ಆರಂಭಿಸಿದ ಚಟುವಟಿಕೆಗಳು ಇಂತಿವೆ: - ಈ ವೈ-ಬ್ರೇಕ್ ಆಪ್ ನ ಮೂಲಕ ರೈತರಿಗೆ ಸಹಾಯವಾಗುವಂತೆ ಸುಮಾರು 75,000 ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಸಸ್ಯಗಳ ಕೃಷಿಗಾಗಿ ಬಿಡುಗಡೆ ಮಾಡಲಾಗಿದೆ. - ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆಯುಷ್ ರೋಗನಿರೋಧಕ ಔಷಧಿಗಳ ವಿತರಣೆ. - ಪ್ರಸ್ತುತ ಈ ಆಯುಷ್ ಆಪ್ಕ್ವಾರ್ ಕಾರ್ಯಕ್ರಮದಿಂದ 2021 ರಲ್ಲಿ ಸುಮಾರು 75 ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಔಷಧೀಯ ಸಸ್ಯಗಳನ್ನು ತೆಗೆದುಕೊಂಡು ಹೋಗುವ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.