Job Description: * ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ರಾಷ್ಟ್ರೀಯ ಕ್ರೀಡಾ ದಿನದ ಹಿನ್ನಲೆಯಿಂದಾಗಿ 'ಫಿಟ್ ಇಂಡಿಯಾ' ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದಾರೆ. * ಈ ಹಿಂದೆ 2019 ರ ಆಗಸ್ಟ್. 29 ರಂದು ಪ್ರಧಾನಿ ನರೇಂದ್ರ ಮೊದಿ ಅವರು ದೇಶದ ಜನತೆಯ ಫಿಟ್ನೆಸ್ ಉತ್ತಮ ಗೊಳಿಸುವ ನಿಟ್ಟಿನಲ್ಲಿ ಫಿಟ್ ಇಂಡಿಯಾ ಮೂವ್ಮೆಂಟ್ಗೆ ಚಾಲನೆಯನ್ನು ನೀಡಿದ್ದಾರೆ. * ಈ ಆಪ್ ಪ್ರಮುಖವಾಗಿ ಬಳಕೆದಾರರ ಫಿಟ್ನೆಸ್ ನ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಫಲಿತಾಂಶಗಳನ್ನು ನೀಡುತ್ತದೆ, ಹಾಗೂ ದೇಹದ ತೂಕ, ಎತ್ತರದ ಬಗೆಗಿನ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. * ಪ್ರಸ್ತುತ ಈ ಫಿಟ್ ಇಂಡಿಯಾ ಆಪ್ ನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದೆ.