Job Description: * ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ಗೆ, ಟೀಮ್ ಇಂಡಿಯಾ ಕ್ರಿಕೆಟ್ ರ ಆಲ್ರೌಂಡರ್ ಕರ್ನಾಟಕ ಮೂಲದ ಸ್ಟುವರ್ಟ್ ಬಿನ್ನಿ ಅವರು 30 ಆಗಸ್ಟ್ 2021 ರಂದು ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. * ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅವರು 2014 ರಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು, ಬಿನ್ನಿ ಅವರು ಒಟ್ಟು 6 ಟೆಸ್ಟ್ ಪಂದ್ಯ, 14 ಏಕದಿನ ಅಂತರರಾಷ್ಟ್ರೀಯ ಪಂದ್ಯ, 3 ಅಂತರರಾಷ್ಟ್ರೀಯ ಟಿ20 ಪಂದ್ಯ, 150 ಐಪಿಎಲ್ ಪಂದ್ಯ ಹಾಗೂ 100 ಕ್ಕೂ ಅಧಿಕ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಟವಾಡಿದ್ದಾರೆ. * ಸ್ಟುವರ್ಟ್ ಬಿನ್ನಿ ಅವರು ತಂದೆಯಾದ ರೋಜರ್ ಬಿನ್ನಿ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರರಾಗಿದ್ದರು, ಹಾಗೂ 1983 ರಲ್ಲಿ ಭಾರತವು ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಟೀಮ್ ನಲ್ಲಿ ಪ್ರಮುಖ ಆಟಗಾರರಾಗಿದ್ದರು.