Job Description: * ಪ್ರತಿವರ್ಷವು ಆಗಸ್ಟ್ 29 ರಂದು ಪರಮಾಣು ಪರೀಕ್ಷೆಗಳ ವಿರುದ್ಧ ಅಂತಾರಾಷ್ಟ್ರೀಯ ದಿನದ ಕಾರ್ಯಕ್ರಮವನ್ನು ನಡೆಸಲಾಗುವದು. * ಈ ದಿನದಂದು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯಿಂದಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನೆಡಸಲಾಗುತ್ತದೆ. * ಪರಮಾಣು ಪರೀಕ್ಷೆಗಳ ವಿರುದ್ಧ ಅಂತಾರಾಷ್ಟ್ರೀಯ ದಿನದ ಕಾರ್ಯಕ್ರಮವನ್ನು 2021 ನ್ನು 12 ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮವೆಂದು ಗುರುತಿಸಲಾಗಿದೆ. * ಪ್ರಸ್ತುತ ಪರಮಾಣು ಪರೀಕ್ಷೆಗಳ ವಿರುದ್ಧ ಅಂತರರಾಷ್ಟ್ರೀಯ ದಿನವನ್ನು 2009 ಡಿಸೆಂಬರ್. 2 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 64 ನೇ ಅಧಿವೇಶನದಲ್ಲಿ ಸ್ಥಾಪನೆ ಮಾಡಲಾಗಿದೆ. * ಮೊದಲ ಪರಮಾಣು ಪರೀಕ್ಷೆಗಳು: - 1945 ರ ಜುಲೈ. 16 ರಂದು ಯುನೈಟೆಡ್ ಸ್ಟೇಟ್ಸ್ ಸೇನೆಯು ನ್ಯೂ ಮೆಕ್ಸಿಕೋದ ಮರುಭೂಮಿಯಲ್ಲಿ ಟ್ರಿನಿಟಿ ಎಂಬ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದೆ, ಅದೇ 1945 ರ ಆಗಸ್ಟ್ ನಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಪರಮಾಣು ಬಾಂಬು ಹಾಕಲು ಯುನೈಟೆಡ್ ಸ್ಟೇಟ್ಸ್ ಗೆ ಅಧಿಕಾರ ನೀಡಿತು. * 1945 ಮತ್ತು 1996 ರ ನಡುವೆ ಅಂದಾಜು 2000 ಪರಮಾಣು ಪರೀಕ್ಷಾ ಸ್ಫೋಟಗಳನ್ನು ನಡೆಸಲಾಗಿದೆ. * 1996 ರಲ್ಲಿ ಸಮಗ್ರ ಪರಮಾಣು ಪರೀಕ್ಷೆ-ನಿಷೇಧ ಒಪ್ಪಂದ (CTBT) ಸ್ಥಾಪಿಸಲಾಗಿದೆ, ಈ ಒಪ್ಪಂದಕ್ಕೆ 170 ರಾಷ್ಟ್ರಗಳು ಸಹಿ ಹಾಕಿ ಅನುಮೋದಿಸಿವೆ, ಹಾಗೂ 15 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ ಆದರೆ ಅನುಮೋದನೇ ನೀಡಿಲ್ಲ, ಹಾಗೂ ಇನ್ನು 11 ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.