Job Description: * ಪ್ರಸ್ತುತ ಎಲ್ಲ ರಾಜ್ಯಗಳಲ್ಲಿ ಅನ್ವಯವಾಗುವಂತೆ ಒಂದೇ ವಾಹನ ನೋಂದಣಿ ಸಂಖ್ಯೆಯನ್ನು ರೋಪಿಸಲಾಗಿದೆ ಅದುವೇ 'ಬಿಎಚ್' ಸರಣಿ. * ಎಲ್ಲ ಹೊಸ ವಾಹನಗಳಿಗೆ 'ಭಾರತ್ ಸರಣಿ' (ಬಿಎಚ್-ಸಿರೀಸ್) ಎನ್ನುವ ಹೊಸ ನೋಂದಣಿ ವ್ಯವಸ್ಥೆಯನ್ನು ರೂಪಿಸಲಾಗಿದೆ. * ಈ ಹೊಸ ನೋಂದಣಿ ವ್ಯವಸ್ಥೆಯನ್ನು ಹೊಂದಿರುವ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ರಾಜ್ಯದಲ್ಲಿ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ವಿರುವದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಹಿತಿ ನೀಡಿದೆ. * ಪ್ರಸ್ತುತ ಈ ಹೊಸ ನೋಂದಣಿ ವ್ಯವಸ್ಥೆಯನ್ನು ರಕ್ಷಣಾ ಸಿಬ್ಬಂದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಿಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು, ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆಯನ್ನು ರೋಪಿಸಲಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಈ ಹೊಸ ನೋಂದಣಿ ವ್ಯವಸ್ಥೆಯು ಕೇಂದ್ರ ಮೋಟಾರು ವಾಹನಗಳ 12 ನೇ ತಿದ್ದುಪಡಿ ನಿಯಮವು ಇದೇ ಸೆಪ್ಟೆಂಬರ್ 15 ರಿಂದ ಜಾರಿಗೆಯಾಗಲಿದೆ, ಹಾಗೂ ಈ ಬಿಎಚ್-ಸರಣಿಯ ವಾಹನಗಳಿಗೆ ಈ ಹೊಸ ನೋಂದಣಿಯನ್ನು ಜಾಲತಾಣದ ಮೂಲಕ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. * ಈ ಮೊದಲು ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ರಾಜ್ಯದಲ್ಲಿ ಅವರು 12 ತಿಂಗಳ ಒಳಗಾಗಿ ಮರು ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವ ನಿಯಮವಿತ್ತು.