Job Description: * ಪ್ರಸ್ತುತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಗುಜರಾತ್ ರಾಜ್ಯದ ಭರೂಚ್ ಜಿಲ್ಲೆಯ ಅಂಕ್ಲೇಶ್ವರದಲ್ಲಿರುವ ಭಾರತ್ ಬಯೋಟೆಕ್ನ ನೂತನ ಘಟಕದಿಂದ ಉತ್ಪಾದಣೆಯಾದ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಬ್ಯಾಚ್ಅನ್ನು ಬಿಡುಗಡೆಗೊಳಿಸಿದರು. * ಗುಜರಾತ್ ರಾಜ್ಯದ ಈ ಘಟಕದಲ್ಲಿ ಕೋವ್ಯಾಕ್ಸಿನ್ನ 20 ಕೋಟಿ ಡೋಸ್ಗಳನ್ನು ಉತ್ಪಾದಿಸಲಾಗುತ್ತದೆ ಎಂದು ತಿಳಿಸಲಾಗಿದೆ. * ಕೇಂದ್ರ ಸರ್ಕಾರವು ಭಾರತ್ ಬಯೋಟೆಕ್ ಕಂಪನಿಯ ಉತ್ಪಾದನಾ ಘಟಕವನ್ನು ಗುಜರಾತ್ ರಾಜ್ಯದ ಅಂಕ್ಲೇಶ್ಚರದಲ್ಲಿ ಸ್ಥಾಪಿಸಲು ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಅನುಮೋದನೆ ನೀಡಿತ್ತು.