Job Description: * ಪ್ರಸ್ತುತ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾ ಬೇನ್ ಪಟೇಲ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಗುಜರಾತ್ ರಾಜ್ಯ ಸರ್ಕಾರದ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್ ಪುರಸ್ಕಾರ್ ಯೋಜನೆ ಅಡಿಯಲ್ಲಿ ಭವೀನಾ ಪಟೇಲ್ ಅವರಿಗೆ '3' ಕೋಟಿ ರೂ. ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ, ಹಾಗೂ ಅವರನ್ನು ಅಭಿನಂದಿಸಿದ್ದಾರೆ. * ಭವೀನಾ ಪಟೇಲ್ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಒಟ್ಟಾರೆ '5' ಚಿನ್ನದ ಪದಕ ಮತ್ತು 13 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.