Job Description: * ಮಹಿಳಾ ಸಬಲೀಕರಣದ ಬಗೆಗಿನ ಮೊದಲ ಜಿ 20 ಸಚಿವರ ಸಮ್ಮೇಳನವನ್ನು ಉದ್ದೇಶಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಾತನಾಡಿದರು. * ಪ್ರಸ್ತುತ ಇಟಲಿಯ ಸಾಂತಾ ಮಾರ್ಗರಿಟಾ ಲಿಗುರ್ನಲ್ಲಿ ಸಮ್ಮೇಳನವನ್ನು ವರ್ಚುಲ್ ರೂಪದಲ್ಲಿ ನಡೆಸಲಾಗಿದೆ, ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಲಿಂಗ ಸಮಾನತೆಗಾಗಿ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ಹಾಗೂ ಉತ್ತಮ ಆರೋಗ್ಯ ರಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ತಂದಿದೆ. * ಈ ಸಮ್ಮೇಳನದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಇರುವ ಭಾರತದ ಒಗ್ಗಟ್ಟನ್ನು ಜಿ 20 ಮಂತ್ರಿ ಸಮ್ಮೇಳನದಲ್ಲಿ ತಿಳಿಸಿದ್ದಾರೆ. * ಪ್ರಸ್ತುತ 19 ದೇಶ ಹಾಗೂ ಯುರೋಪಿಯನ್ ಒಕ್ಕೂಟವು ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ನ ಪ್ರತಿನಿಧಿಗಳನ್ನು ಈ ಜಿ 20 ಹೊಂದಿದೆ. * ಪ್ರಸ್ತುತ 1997-1999 ರ ಏಶಿಯಾನ್ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ G-7 ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಆಹ್ವಾನಿಸಿದ ನಂತರ ಈ G-20 ಮಂತ್ರಿ ಮಟ್ಟದ ವೇದಿಕೆಯು ಸೃಷ್ಟಿಯಾಗಿದೆ. * ವಾರ್ಷಿಕವಾಗಿ G-20 ನಾಯಕರು ಭೇಟಿಯಾಗಲು ನಿರ್ಧರಿಸಿದ್ದಾರೆ.