Job Description: * 2021 ರ ಆಗಸ್ಟ್. 26 ರಂದು ಗಲ್ಫ್ ಆಫ್ ಏಡನ್ ನಲ್ಲಿ ಭಾರತ ಮತ್ತು ಜರ್ಮನಿಯ ನೌಕಾಪಡೆಗಳು ಜಂಟಿ ವ್ಯಾಯಾಮವನ್ನು ನಡೆಸಿವೆ. * ಈ ಜಂಟಿ ವ್ಯಾಯಾಮದಲ್ಲಿ ಹೆಲಿಕಾಪ್ಟರ್ ಇಳಿಯುವಿಕೆಗಳು, ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳಿದ್ದವು. * ಭಾರತೀಯ ನೌಕಾಪಡೆಯ ಯುದ್ಧನೌಕೆಯು ಫ್ರಿಕೇಟ್ 'ತ್ರಿಕಾಂಡ್' ಜರ್ಮನ್ ಯುದ್ಧನೌಕೆ 'ಬೇಯರ್ನ್' ನೊಂದಿಗೆ ವ್ಯಾಯಾಮ ನಡೆಸಿದೆ. * ಪ್ರಸ್ತುತ ಈ INS ತ್ರಿಕಾಂಡ್ ಯುದ್ಧನೌಕೆಯನ್ನು ಗಲ್ಫ್ ಆಫ್ ಏಡನ್ ಪ್ರದೇಶದಲ್ಲಿ ಪೈರಸಿ ವಿರೋಧಿ ಗಸ್ತುಗಾಗಿ ನಿಯೋಜನೆ ಮಾಡಲಾಗಿದೆ. * ಈ ಹಿಂದೆ 2008 ರಲ್ಲಿ ಭಾರತ ಮತ್ತು ಜರ್ಮನ್ ರಾಷ್ಟ್ರಗಳ ನೌಕಾಪಡೆಗಳು ಮೊದಲ ಜಂಟಿ ಸಮರಾಭ್ಯಾಸವನ್ನು ಕೈಗೊಂಡಿದ್ದವು ನಡೆಸಿದವು, ಅದಕ್ಕೂ ಮುಂಚಿತವಾಗಿ ಅಂದರೆ 2006 ರಲ್ಲಿ ಉಭಯ ರಾಷ್ಟ್ರಗಳು 'ಕಡಲ್ಗಳ್ಳತನ ವಿರೋಧಿ ಸಹಕಾರ ಒಪ್ಪಂದ'ಕ್ಕೆ ಪರಸ್ಪರ ಒಪ್ಪಕಿಕೊಂಡು ಸಹಿ ಹಾಕಿದ್ದವು. * ಪ್ರಸ್ತುತ ಜರ್ಮನಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ, ಭಾರತವು ಹೆಚ್ಚಾಗಿ ಜವಳಿ ವಲಯ, ರಾಸಾಯನಿಕ ಉತ್ಪನ್ನಗಳು, ಲೋಹ ಮತ್ತು ಚರ್ಮದ ಸರಕುಗಳು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳನ್ನು ಜರ್ಮನಿಗೆ ರಫ್ತು ಮಾಡುತ್ತಿತ್ತು. * ಭಾರತದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಜರ್ಮನಿಯ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ ಎಂದು ತಿಳಿದು ಬಂದಿದೆ.