Job Description: * 2021 ರ ಆಗಸ್ಟ್. 26 ರಂದು ರಾಷ್ಟ್ರೀಯ ಶಿಕ್ಷಣ ನೀತಿ -2020 (NEP-2020)ಯನ್ನು ಮಧ್ಯಪ್ರದೇಶ ರಾಜ್ಯ ಸರ್ಕಾರವು ಜಾರಿಗೊಳಿಸಿದೆ. * NEP-2020 ಯನ್ನು ಜಾರಿಗೆ ತಂದ ಭಾರತದ 2 ನೇ ರಾಜ್ಯ ಮಧ್ಯೆ ಪ್ರದೇಶ, ಈ ಹೊಸ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಗಡಿಯ ಹೊರಗೆ ಅನ್ವೇಷಿಸಲು ಸಹಾಯ ಮಾಡಲಿದೆ. * ಈ ಹೊಸ ಶಿಕ್ಷಣ ನೀತಿಯು NSS, NCC, ಹಾಗೂ ಕೌಶಲ್ಯ ಆಧಾರಿತ ವಿಷಯಗಳ ಮೇಲೆ ಹೆಚ್ಚು ನಿಗಾವಹಿಸಲಿದೆ ಎಂದು ತಿಳಿದು ಬಂದಿದೆ. * ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ಮಾಡುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಆರಂಭಿಸಲಾಗಿದೆ. * ಈ NEP ಯು ಮೊದಲು ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರಕ್ಕೆ ಒತ್ತು ನೀಡಲಿದೆ, ಹಾಗೂ ವೃತ್ತಿಪರ ಶಿಕ್ಷಣವು ತರಗತಿಯ ಪ್ರಕಾರ 6 ನೇ ತರಗತಿಯಿಂದ ಇಂಟರ್ನ್ಶಿಪ್ನೊಂದಿಗೆ ಆರಂಭಿಸಲಿದೆ, ಅಲ್ಲದೇ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಕನಿಷ್ಠ 5 ನೇ ತರಗತಿಯವರೆಗೆ ಕಲಿಸಲು ಸಹಾಯ ನೀಡುತ್ತದೆ, ಹಾಗೂ ಯಾವುದೇ ಭಾಷೆಯನ್ನು ವಿದ್ಯಾರ್ಥಿಯ ಮೇಲೆ ಹೇರುವುದಿಲ್ಲ ಎಂದು ತಿಳಿಸಿದೆ.