Job Description: * ಉಡಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಬೆಂಗಳೂರು ಮತ್ತು ಗುಜರಾತ್ ರಾಜ್ಯದ ಜಾಮ್ ನಗರ ಮಧ್ಯೆ ನೇರ ವಿಮಾನ ಸೌಕರ್ಯ ಪ್ರಾರಂಭವಾಗಿದೆ, ಈ ವಿಮಾನ ಸೌಕರ್ಯವೂ ವಾರದಲ್ಲಿ 3 ದಿನಗಳ ಈ ಎರಡು ನಗರಗಳ ನಡುವೆ ವಿಮಾನ ಸಂಚರಿಸಲಿದೆ. * ಈ ಕೇಂದ್ರ ಸರ್ಕಾರದ ಈ ಯೋಜನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ವಿಮಾನಯಾನ ಖಾತೆ ರಾಜ್ಯ ಸಚಿವರು ಜನರಲ್ ಡಾ. ವಿ. ಕೆ. ಸಿಂಗ್ ಅವರು ವರ್ಚುವಲ್ ಸಭೆಯ ಮೂಲಕ ಈ ವಿಮಾನ ಸೇವೆಗೆ ಚಾಲನೆ ನೀಡಿದ್ದಾರೆ. * ಈ ಉಡಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಬೆಂಗಳೂರು, ಹಾಗೂ ಗುಜರಾತ್ ರಾಜ್ಯದ ಜಾಮ್ ನಗರ, ಮತ್ತು ತೆಲಂಗಾಣ ರಾಜ್ಯದ ಹೈದರಾಬಾದ್ ನಗರಗಳ ಮಧ್ಯೆ ಆರಂಭವಾದ ಮೊದಲ ನೇರ ವಿಮಾನ ಸೇವೆಗೆ ಇದಾಗಿದೆ ಹಾಗೂ ಇದಕ್ಕೆ ಚಾಲನೆ ನೀಡಿದ್ದಾರೆ. * ಗುಜರಾತ್ ರಾಜ್ಯದ ಜಾಮ್ ನಗರವನ್ನು "ಛೋಟಿ ಕಾಶಿ" ಎಂದು ಕರೆಯುತ್ತಾರೆ, ಹಾಗೂ ಈ ಜಾಮ್ ನಗರವನ್ನು ಚಾರ್ ಧಾಮಗಳಲ್ಲಿ ಒಂದಾಗಿರುವ ಮೋಕ್ಷಪುರಿ ನಗರ ದ್ವಾರಕಾದ ಗೇಟ್ವೇ ನಗರ ಎನ್ನುವರು, ಪ್ರಸ್ತುತ ಈ ನಗರವು 100 ಕ್ಕೂ ಅಧಿಕ ದೇವಾಲಯಗಳನ್ನೂ ಹೊಂದಿದೆ. * ಒಟ್ಟಾರೆ 369 ಮಾರ್ಗಗಳು ಹಾಗೂ 60 ವಿಮಾನ ನಿಲ್ದಾಣಗಳು ಈ ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.