Job Description: * ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (IT) 300 ನವೋದ್ಯಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಮೃದ್ಧ್(ಸ್ಟಾರ್ಟ್ಅಪ್ ಆಕ್ಸಲರೇಟರ್ ಆಫ್ ಎಂಇಐಟಿವೈ ಫಾರ್ ಪ್ರಾಡಕ್ಟ್ ಇನೊವೇಷನ್, ಡೆವಲಪ್ಮೆಂಟ್ ಆಯಂಡ್ ಗ್ರೋತ್)ಯೋಜನೆಯನ್ನು ಆರಂಭಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. * ಮಾಹಿತಿ ಹಾಗೂ ತಂತ್ರಜ್ಞಾನ (IT) ಇಲಾಖೆ ಈ ಸಮೃದ್ಧ್ ಯೋಜನೆ ಅಡಿಯಲ್ಲಿ ಆಯ್ದ ನವೋದ್ಯಮಗಳಲ್ಲಿ 100 ಯೂನಿಕಾರ್ನ್ಗಳನ್ನು ಸಿದ್ಧಪಡಿಸುವ ಯೋಜನೆಯಿಂದ ಆರಂಭಿಕ ಬಂಡವಾಳ, ಮಾರ್ಗದರ್ಶನ ಇದಲ್ಲದೇ ಮಾರುಕಟ್ಟೆ ಪ್ರವೇಶದ ಅವಕಾಶವನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರದ ಈ ಸಮೃದ್ಧ್ ಯೋಜನೆಯ ಅಡಿಯಲ್ಲಿ ಆಯ್ಕೆ ಆಗುವ ಹೊಸ ಉದ್ಯಮಗಳಿಗೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯವು ಅಂದಾಜು 40 ಲಕ್ಷ ಆರಂಭಿಕ ಬಂಡವಾಳ ನೀಡಲಿದೆ ಮತ್ತು ಆರು ತಿಂಗಳುಗಳ ಕಾಲ ಮಾರ್ಗದರ್ಶನ (ಟ್ರೇನಿಂಗ)ವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.