Job Description: * 2021 ರ ಅಕ್ಟೋಬರ್. 21 ರಂದು ಯುಎಇಯಲ್ಲಿ ವಿಶ್ವದ ಅತಿದೊಡ್ಡ ಹಾಗೂ ಅತಿ ಎತ್ತರದ ವೀಕ್ಷಣಾ ಚಕ್ರವನ್ನು ತೆರೆಯಲಾಗುವುದು ಎಂದು ತಿಳಿದು ಬಂದಿದೆ, ಇದಕ್ಕೆ ಐನ್ ದುಬೈ ಎಂದು ಕರೆಯುತ್ತಾರೆ. * ಈ ವೀಕ್ಷಣಾ ಚಕ್ರವು ದುಬೈನಲ್ಲಿ ದಾಖಲೆಯನ್ನು ನಿರ್ಮಿಸಲಿದೆ, ಐನ್ ದುಬೈ ಲಂಡನ್ ಐಗಿಂತ ಸುಮಾರು 42.5 ಮೀ ಎತ್ತರವಾಗಿರಲಿದೆ, ಈ ವೀಕ್ಷಣಾ ಚಕ್ರವು ಪ್ರವಾಸಿಗರನ್ನು 250 ಮೀಟರ್ ಎತ್ತರಕ್ಕೆ ಕರೆದೊಯ್ಯುಲಿದೆ ಇದರಿಂದಾಗಿ ಆಕಾಶದಿಂದ ದುಬೈನ ಸುಂದರವಾದ ಭವ್ಯ ನೋಟವನ್ನು ನೋಡಬಹುದಾಗಿದೆ. * ಇದು ದುಬೈ ಮರೀನಾ ಬಳಿಯ ಬ್ಲೂವಾಟರ್ಸ್ ದ್ವೀಪದಲ್ಲಿದೆ, ಇದು ಮನರಂಜನಾ ವಲಯವಾಗಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. * ಈ ಹಿಂದೆ 2013 ರ ಫೆಬ್ರವರಿಯಲ್ಲಿ ಬ್ಲೂವಾಟರ್ಸ್ ದ್ವೀಪದಲ್ಲಿ 250 ಮೀ ಎತ್ತರದ ವೀಕ್ಷಣಾ ಚಕ್ರವನ್ನು ನಿರ್ಮಿಸಲು ಘೋಷಣೆ ಮಾಡಲಾಗಿದೆ, ಇದರ ನಿರ್ಮಾಣದ ಕಾರ್ಯವು 2015 ರ ಮೇ ತಿಂಗಳಿಂದ ಆರಂಭವಾಗಿದೆ.