Job Description: * 2021 ರ ಆಗಸ್ಟ್. 24 ರಂದು ಪಾಕಿಸ್ತಾನ ರಾಷ್ಟ್ರವು ಫತಾಹ್ -1 ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. * ಪಾಕಿಸ್ತಾನ ನಿರ್ಮಿತ ಈ ಫತಾಹ್ -1 ಬಹು ಉಡಾವಣೆಯ ರಾಕೆಟ್ ವ್ಯವಸ್ಥೆಯಾಗಿದೆ, ಇದು ಸುಮಾರು 140 ಕಿ. ಮೀ. ದೂರದವರೆಗೆ ಸಿಡಿತಲೆಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. * ಪಾಕಿಸ್ತಾನ ಸ್ಥಳೀಯವಾಗಿ ನಿರ್ಮಿಸಿರುವ ಈ ಫತಾಹ್ -1 ಪರೀಕ್ಷಾ ಹಾರಾಟವನ್ನು ಈ ಮೊದಲು 2021 ರ ಜನೇವರಿಯಲ್ಲಿ ನಡೆಸಲಾಗಿತ್ತು, ಇದೀಗ ಮತ್ತೆ ಆಗಸ್ಟ್. 24 ರಂದು 2 ನೇ ಪರೀಕ್ಷೆ ನಡೆಸಿದೆ. * ಪಾಕಿಸ್ತಾನದ ಸೇನೆಯು 2021 ರಲ್ಲಿ ಶಾಹೀನ್ 1-ಎ, ಶಾಹೀನ್ -3, ಘಜ್ನವಿ, ಬಾಬರ್ ಕ್ರೂಸ್ ಕ್ಷಿಪಣಿಯನ್ನು ಉಡಾವಣೆ ಮಾಡಿದೆ.