Job Description: * 2021 ರ ಆಗಸ್ಟ್. 24 ರಂದು ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು 'ವ್ಯಾಕ್ಸಿನೇಟ್ ಇಂಡಿಯಾ ಪ್ರೋಗ್ರಾಂ'ನ್ನು ಆರಂಭಿಸಿದರು, ಹಾಗೂ ಇದೇ ಸಂದರ್ಭದಲ್ಲಿ ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. * 'ವ್ಯಾಕ್ಸಿನೇಟ್ ಇಂಡಿಯಾ ಪ್ರೋಗ್ರಾಂ' ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಗಿವ್ ಇಂಡಿಯಾ ಫೌಂಡೇಶನ್ ಮತ್ತು ಸುಸ್ಥಿರ ಗುರಿಗಳ ಸಮನ್ವಯ ಕೇಂದ್ರ ಆಯೋಜಿಸಿದೆ, ಹಾಗೂ ಇದನ್ನು ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಸಹಾಯದೊಂದಿಗೆ ಸಿಎಸ್ಆರ್ ಅಡಿಯಲ್ಲಿ ಆರಂಭಿಸಿದ್ದಾರೆ. * 2021 ರ ಜನವರಿ. 16 ರಂದು ಭಾರತ ಸರ್ಕಾರವು ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.