Job Description: * 20 ವರ್ಷ ಒಳಗಿನವರ ವಿಶ್ವ ಅಥ್ಲೆಟಿಕ್ಸ್ ಕೂಟದ ಮಹಿಳೆಯರ ಲಾಂಗ್ ಜಂಪ್ ವಿಭಾಗದಲ್ಲಿ ಭಾರತದ ಅಥ್ಲೀಟ್ ಶೈಲಿ ಸಿಂಗ್ ಅವರು 6.59 ಮೀ. ದೂರ ಜಿಗಿದು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಸ್ವೀಡನ್ ದೇಶದ ಮಾಜಾ ಆಸ್ಕಾಗ್ ಅವರು ಈ ಮಹಿಳೆಯರ ಲಾಂಗ್ಜಂಪ್ ವಿಭಾಗದಲ್ಲಿ 6.60 ಮೀ. ದೂರ ಜಿಗಿದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಉಕ್ರೇನ್ ನ ಮರಿಯಾ ಹಾರಿಲೊವಾ ಅವರು 6.50 ಮೀ. ದೂರ ಜಿಗಿದು ಕಂಚಿನ ಪದಕವನ್ನು ಜಯಿಸಿದರು. * ಇದಕ್ಕೂ ಮೊದಲು ಇದೇ ಕ್ರೀಡಾಕೂಟದಲ್ಲಿ ಭಾರತದ 4X400 ಮೀಟರ್ಸ್ ಮಿಶ್ರ ರಿಲೆ ತಂಡವು ಕಂಚಿನ ಪದಕ ಪಡೆದಿದೆ, ಹಾಗೂ ಪುರುಷರ 10 ಕಿ.ಮೀ ನಡಿಗೆಯಲ್ಲಿ ಅಮಿತ್ ಖತ್ರಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * 2016 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಪಟು, ಹಾಗೂ 2018 ರಲ್ಲಿ ಹಿಮಾ ದಾಸ್ ಅವರು ಓಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.