Job Description: * ಪ್ರಸ್ತುತ ಪ್ರವಾಸಿ ರಾಜ್ಯವಾದ ಗೋವಾದಲ್ಲಿ ಮೊದಲ ಆಲ್ಕೋಹಾಲ್ ಮ್ಯೂಸಿಯಂ ಆರಂಭಿಸಲಾಗಿದೆ, ಪ್ತಸ್ತುತ ಸ್ಥಳೀಯ ವಿಶೇಷ ಮದ್ಯ ಫೆನ್ನಿಯ ಪ್ರಸಿದ್ಧತೆಯನ್ನು ದೇಶ ವಿದೇಶಕ್ಕೆ ತಲುಪುವಂತೆ ಮಾಡಲು ಈ ಮ್ಯೂಸಿಯಂ ತೆರೆಯಲಾಗಿದೆ ಎಂದು ತಿಳಿದು ಬಂದಿದೆ. * ಇದೀಗ ಗೋವಾ ರಾಜ್ಯದಲ್ಲಿ ಉದ್ಯಮಿ ನಂದನ್ ಕುಡಡ್ಕರ್ ಅವರು 'ಆಲ್ ಎಬೌಟ್ ಆಲ್ಕೋಹಾಲ್’(All About Alcohol) ಹೆಸರಿನ ಮ್ಯೂಸಿಯಂ ಪ್ರಾರಂಭಿಸಿದ್ದಾರೆ. * ಪ್ರಸ್ತುತ ಗೋವಾದ ಪರಂಪರೆ ಹಾಗೂ ಪೆನ್ನಿಯ ಮೂಲ, ಇದು ಬ್ರೆಜಿಲ್ನಿಂದ ಗೋವಾಕ್ಕೆ ಬಂದಿದೆ, ಇದರ ಮಾಹಿತಿಯನ್ನೂ ಜನರಿಗೆ ತಿಳಿಸಲು ಈ ಮ್ಯೂಸಿಯಂ ಆರಂಭಿಸಲಾಗಿದೆ ಎಂದಿದ್ದಾರೆ. * ಪೆನ್ನಿ ಎಂಬುವುದು ಗೋವಾ ರಾಜ್ಯದಲ್ಲಿ ಸಿದ್ಧವಾಗುತ್ತಿರುವ ಮದ್ಯ(ಆಲ್ಕೋಹಾಲ್), ಈ ಆಲ್ಕೋಹಾಲ್ ವನ್ನು 2016 ರಲ್ಲಿ ಗೋವಾ ರಾಜ್ಯದ ಪಾರಂಪರಿಕ ಮದ್ಯ ಎಂದು ಸರ್ಕಾರ ಗುರುತಿಸಿದೆ. * ಈ ಹಿಂದೆ ಪೋರ್ಚುಗೀಸರು 1700 ರಲ್ಲಿ ಬ್ರೆಜಿಲ್ನಿಂದ ಗೇರು ಬೀಜಗಳನ್ನೂ ತಂದು ಗೋವಾದಲ್ಲಿ ಬೆಳೆಯಲು ಆರಂಭಿಸಿದರು, ನಂತರದ ದಿನಗಳಲ್ಲಿ ಗೇರು ಹಣ್ಣುಗಳಿಂದ ಪೆನ್ನಿ ಮದ್ಯ ತಯಾರಿಸಲು ಆರಂಭಿಸಿದ್ದರು.