Job Description: * ಇತ್ತೀಚಿಗೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ, ಆದರೆ ತಾಲಿಬಾನ್ ಉಗ್ರರು ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿತ್ತು, ಇದಾದ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣವನ್ನು ನಿಷೇಧಿಸಿದ್ದಾರೆ, ಎಂದು ಅಫ್ಘಾನಿಸ್ತಾನ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್ ಅವರು ಹೇಳಿದ್ದಾರೆ. * ಪ್ರಸ್ತುತ ಸಹ-ಶಿಕ್ಷಣವನ್ನು ನಿಷೇಧಿಸುವ ಈ ನಿರ್ಧಾರವನ್ನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸುದ್ದಿವಾಹಿನಿ ಖಾಮಾ ಪ್ರೆಸ್ ನ್ಯೂಸ್ ಮಾಹಿತಿ ನೀಡಿದೆ. * ತಾಲಿಬಾನಿಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಹೊರಡಿಸಿದ ಮೊದಲ 'ಫತ್ವಾ' ಇದಾಗಿದೆ. * ಪ್ರಸ್ತುತ ಈ ಸಹ-ಶಿಕ್ಷಣವು ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲವಾಗಿದೆ ಎಂದು ಫರೀದ್ ಅವರು ತಿಳಿಸಿದ್ದಾರೆ.