Job Description: * ಪ್ರಸ್ತುತ ಫೇಸ್ಬುಕ್ ಇಂಡಿಯಾ ಜಾಹೀರಾತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಉದ್ಯಮ ವೇದಿಕೆ ಇಂಡಿಫೈ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ, ಈ ಒಪ್ಪಂದವು ಸಣ್ಣ ಉದ್ಯಮಗಳಿಗೆ ಸಾಲ ಪಡೆಯಲು ಸಹಾಯವಾಗಲಿದೆ. * ಪ್ರಸ್ತುತ ಫೇಸ್ಬುಕ್ ಅಥವಾ ಅದರ ಗ್ರೂಪ್ ಆಯಪ್ಗಳಲ್ಲಿ ಕನಿಷ್ಠ 180 ದಿನಗಳವರೆಗೆ ಜಾಹೀರಾತು ನೀಡುವ ಸಣ್ಣ ಉದ್ಯಮಗಳಿಗೆ ವಾರ್ಷಿಕ ಶೇ. 20 ರ ಬಡ್ಡಿದರದಲ್ಲಿ 50,00,00 ರಿಂದ ರೂ. 50,00,000 ರೂ. ವರೆಗೆ ಸಾಲ ನೀಡಲಾಗುತ್ತದೆ ಎಂದು ಫೇಸ್ಬುಕ್ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರು ವರ್ಚ್ಯುವಲ್ ಸಭೆಯಲ್ಲಿ ತಿಳಿಸಿದ್ದಾರೆ. * ಫೇಸ್ಬುಕ್ ಹಾಗೂ ಈ ಇಂಡಿಫೈ ಜೊತೆ ಒಪ್ಪಂದವು ಮಹಿಳಾ ನೇತೃತ್ವದ ವ್ಯಾಪಾರಗಳಿಗೆ ಸಾಲಗಳನ್ನು ಶೇ. 0.2 ಬಡ್ಡಿದರದಲ್ಲಿ ಕಡಿಮೆಗೊಳಿಸುತ್ತದೆ, ಹಾಗೂ ಸಣ್ಣ ಉದ್ಯಮಗಳಿಗೆ ಜಾಗತಿಕ ಮತ್ತು ರಾಷ್ಟ್ರೀಯ ವ್ಯವಹಾರಗಳಾಗಲು ಸಹಾಯ ಮಾಡುತ್ತದೆ.