Job Description: * ವಿಯೆಟ್ನಾಂ ನ ಸಮಾಜವಾದಿ ಗಣರಾಜ್ಯದ ರಾಯಭಾರಿಯಾದ ಮಿ. ಫಾಮ್ಸನ್ಚಾವ್, ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಪ್ರಪ್ರಥಮ ರಾಯಭಾರಿ ಕಚೇರಿ ತೆರೆದಿರುವದಾಗಿ ಘೋಷಣೆ ಮಾಡಿದ್ದಾರೆ. * ವಿಯೆಟ್ನಾಂನ ಗೌರವಾನ್ವಿತ ರಾಯಭಾರಿಯಾಗಿ ಮಿ. ಎನ್ ಎ ಶ್ರೀನಿವಾಸಮೂರ್ತಿಯವರನ್ನು ನೇಮಿಸಲಾಗಿತ್ತು, ಇದೀಗ ಮೂರ್ತಿ ಅವರು ಭಾರತದ ಯಾವುದೇ ರಾಜ್ಯದಲ್ಲಿ ಮೊದಲನೇ ಹಾಗೂ ವಿಶ್ವದಲ್ಲಿ 19 ನೇ ಯವರಾಗಿ ಪ್ರಪ್ರಥಮ ಗೌರವಾನ್ವಿತ ರಾಯಭಾರಿಯಾಗಿದ್ದಾರೆ. * ಭಾರತ ವಿಯೆಟ್ನಾಂನ 26 ನೇ ಹೂಡಿಕೆ ಪಾಲುದಾರನಾಗಿ, ಸುಮಾರು 2 ಬಿಲಿಯನ್ ಡಾಲರ್ಸ್ ಹೂಡಿಕೆ ಮಾಡುತ್ತಿದೆ, ಪ್ರಸ್ತುತ ವಿಯೆಟ್ನಾಂನಲ್ಲಿ ಗೇಮಿಂಗ್, ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಮತ್ತು ತಂತ್ರಜ್ಞಾನವಲಯಗಳಿವೆ, ಇದೀಗ ಈ ದೇಶವು ಬೆಂಗಳೂರುನಲ್ಲಿ ಹೂಡಿಕೆ ಮಾಡಲು ಸಹಕಾರ ನೀಡಲಿದೆ ಎಂದು ತಿಳಿದು ಬಂದಿದೆ. * ವಿಯೆಟ್ನಾಂ ನ ರಾಯಭಾರಿ ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾದ, ಡಾ. ರಜನೀಶ್ ಗೋಯಲ್ ಅವರನ್ನು ಭೇಟಿಯಾಗಿ ಬೆಂಗಳೂರಿನ ತಂತ್ರಜ್ಞಾನ ಸಮ್ಮೇಳನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. * ವಿಯೆಟ್ನಾಂ ವಿಶ್ವದಲ್ಲಿ ಅತ್ಯಂತ ವೇಗವಾಗಿ ಹಾಗೂ ಆರ್ಥಿಕವಾಗಿ ಬೆಳೆಯುತ್ತಿರುವ ದೇಶವಾಗಿದೆ ಎಂದು ಮಿ. ಮೂರ್ತಿ ಅವರು ತಿಳಿಸಿದ್ದಾರೆ.