Job Description: * ತಮಿಳುನಾಡು ರಾಜ್ಯದ ಹಿರಿಯ ಬಿಜೆಪಿ ನಾಯಕ ಎಲ್.ಗಣೇಶನ್ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕ ಮಾಡಿದ್ದಾರೆ. * ಬಿಜೆಪಿ ನಾಯಕ ಎಲ್. ಗಣೇಶನ್ ಅವರು ಮಣಿಪುರ ರಾಜ್ಯದ 17 ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. * ಈ ಮೊದಲು ನಜಾ ಹೆಫ್ತುಲ್ಲಾ ಅವರು ಮಣಿಪುರದ ರಾಜ್ಯಪಾಲರಾಗಿದ್ದರು, ಇದೀಗ ಅವರ ಸ್ಥಾನಕ್ಕೆ ಹಿರಿಯ ಬಿಜೆಪಿ ನಾಯಕ ಎಲ್.ಗಣೇಶನ್ ನೇಮಕವಾಗಿದ್ದಾರೆ. * ಎಲ್.ಗಣೇಶನ್ ಅವರು 1945 ರ ಫೆಬ್ರವರಿ. 16 ರಂದು ಜನಿಸಿದ್ದಾರೆ, ಹಾಗೂ ಇವರು ಒಬ್ಬ ಭಾರತೀಯ ರಾಜಕಾರಣಿ ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದಾರೆ, ಪ್ರಸ್ತುತ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾಗಿದ್ದಾರೆ.