Job Description: * ಪಂಜಾಬ್ ರಾಜ್ಯದ ಹತ್ತು ಸರ್ಕಾರಿ ಶಾಲೆಗಳಿಗೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಹಾಕಿ ತಂಡದ ಆಟಗಾರರ ಹೆಸರನ್ನು ಇಡಲಾಗುವದು, ಹಾಗೂ ಅದೇ ಹೆಸರುಗಳಿಂದ ಆ ಶಾಲೆಗಳನ್ನು ಕರೆಯಲಾಗುವುದು, ಎಂದು ಪಂಜಾಬ್ ರಾಜ್ಯದ ಶಾಲಾ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಅವರು ತಿಳಿಸಿದ್ದಾರೆ, ಹಾಗೂ ಇದಕ್ಕೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಒಪ್ಪಿಗೆಯನ್ನು ನೀಡಿದ್ದಾರೆ ಎನ್ನಲಾಗಿದೆ. * ಪ್ರಸ್ತುತ ಭಾರತದ ಪುರುಷರ ಹಾಕಿ ತಂಡವು '4' ದಶಕಗಳ ಬಳಿಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ, ಈ ಹಿನ್ನಲೆಯಿಂದಾಗಿ ಪಂಜಾಬ್'ನ ಶಾಲೆಗಳಿಗೆ ಪುಟ್ಬಾಲ್ ತಂಡದ ನಾಯಕ ಮನ್ಪ್ರೀತ್ ಸಿಂಗ್, ಉಪನಾಯಕ ಹರ್ಮನ್ಪ್ರೀತ್ ಸಿಂಗ್, ಮನದೀಪ್ ಸಿಂಗ್, ಶಂಷೇರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಸಿಮ್ರನ್ ಜೀತ್ ಸಿಂಗ್ ಅವರ ಹೆಸರುಗಳನ್ನು ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.