Job Description: * ಪ್ರಸ್ತುತ ಭಾರತ-ಚೀನಾ ಗಡಿಯ ಬಳಿ ಅಂದರೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಮನ ಗ್ರಾಮದಲ್ಲಿ 11,000 ಅಡಿ ಎತ್ತರದ ಭಾರತದ ಅತ್ಯುನ್ನತ ಗಿಡಮೂಲಿಕೆ ಉದ್ಯಾನವನ್ನು ಉದ್ಘಾಟಿಸಲಾಗಿದೆ. * ಭಾರತದ ಈ ಎತ್ತರದ ಗಿಡಮೂಲಿಕೆ ಉದ್ಯಾನವು ವಿವಿಧ ಔಷಧೀಯ ಮತ್ತು ಸಾಂಸ್ಕೃತಿಕವಾಗಿ ಪ್ರಮುಖ ಆಲ್ಪೈನ್ ಜಾತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪರಿಸರ ವಿಜ್ಞಾನದ ಕುರಿತು ಸಂಶೋಧನೆ ನಡೆಸುವ ಹಿನ್ನಲೆಯಿಂದಾಗಿ ಉದ್ಘಾಟಿಸಲಾಗಿದೆ. * ಉತ್ತರಾಖಂಡದ ಚಮೋಲಿ ಜಿಲ್ಲೆಯ ಮನ ಗ್ರಾಮದಲ್ಲಿ ಮೂರು(3) ಎಕರೆ ಪ್ರದೇಶದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. * ಈ ಉದ್ಯಾನವನ್ನು ಕೇಂದ್ರ ಸರ್ಕಾರದ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಹಾಗೂ ಯೋಜನಾ ಪ್ರಾಧಿಕಾರದ ಯೋಜನೆ ಅಡಿಯಲ್ಲಿ ಮೂರು ವರ್ಷಗಳಲ್ಲಿ ನಿರ್ಮಿಸಲಾಗಿದೆ. * ಈ ಹರ್ಬಲ್ ಪಾರ್ಕ್ ನಲ್ಲಿ 40 ಜಾತಿಗಳನ್ನು ಒಳಗೊಂಡಿದೆ, ಹಾಗೂ ಇವು ಭಾರತೀಯ ಹಿಮಾಲಯ ಪ್ರದೇಶದ ಎತ್ತರದ ಆಲ್ಪೈನ್ ಪ್ರದೇಶಗಳಲ್ಲಿ ಕಾಣಸಿಗುತ್ತವೆ, ಈ ಪಾರ್ಕ್ ಹಲವಾರು ಪ್ರಮುಖ ಔಷಧೀಯ ಗಿಡಮೂಲಿಕೆಗಳನ್ನು ಒಳಗೊಂಡಿದೆ. * ಉದ್ಯಾನವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ: - ಮೊದಲ ವಿಭಾಗ- ಇದು ಬದರಿನಾಥಗೆ ಸಂಬಂಧಿಸಿದ ಬದ್ರಿ ತುಳಸಿ, ಬದರಿ ಮರ, ಬದರಿ ಬೆರ್ ಮತ್ತು ಭೋಜಪತ್ರದ ಪವಿತ್ರ ಮರವನ್ನು ಒಳಗೊಂಡಿದೆ. - ಎರಡನೇ ವಿಭಾಗ- ಈ ವಿಭಾಗವನ್ನು ಅಷ್ಟವರ್ಗ(8) ಜಾತಿಗಳಿಗೆ ಸಮರ್ಪಿಸಲಾಗಿದೆ, ಇದು ಹಿಮಾಲಯ ಪ್ರದೇಶದಲ್ಲಿ ಕಂಡುಬರುತ್ತದೆ. - ಮೂರನೇ ವಿಭಾಗ- ಈ ವಿಭಾಗವು ಸೌಸುರಿಯಾ ಜಾತಿ, ಹಾಗೂ ಉತ್ತರಾಖಂಡದ ರಾಜ್ಯ ಹೂವಾದ ಬ್ರಹ್ಮಕಮಲವನ್ನು ಒಳಗೊಂಡಿದೆ. - ನಾಲ್ಕನೇ ವಿಭಾಗ- ಈ ವಿಭಾಗವು ಅತೀಶ್, ಮೀಥಾವಿಶ್, ಚೋರು ಮತ್ತು ವಂಕಕ್ಡಿಯಂತಹ ಬಗೆಬಗೆಯ ಆಲ್ಪೈನ್ ಜಾತಿಗಳನ್ನು ಒಳಗೊಂಡಿದೆ.