Job Description: * ಆಗಸ್ಟ್. 20 ರಂದು ಸೋಮನಾಥದಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಿದರು. * ಪ್ರಸ್ತುತ ಗುಜರಾತ್ ರಾಜ್ಯದ ವೆರಾವಲ್ ನಗರವನ್ನು ಸೋಮನಾಥ ನಗರ ಎಂದು ಹೆಸರು ಬಲಾಯಿಸಲಾಗಿದೆ. * ಈ ನಗರದಲ್ಲಿ ಪ್ರಧಾನಿ ಮೋದಿ ಅವರು ಸೋಮನಾಥ ವಾಯುವಿಹಾರ, ಸೋಮನಾಥ ಪ್ರದರ್ಶನ ಕೇಂದ್ರದ ಪುನರ್ನಿರ್ಮಾಣಗೊಂಡ ದೇವಾಲಯದ ಆವರಣವನ್ನು ಉದ್ಘಾಟಿಸಿದರು, ಹಾಗೂ ಅಲ್ಲಿಯೇ ಶ್ರೀ ಪಾರ್ವತಿ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿದರು. * ಸೋಮನಾಥ ದೇವಸ್ಥಾನವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಆಗಿನ ವೆರಾವಲ್ ನಗರ (ಈಗಿನ ಸೋಮನಾಥ ನಗರ) ದಲ್ಲಿದೆ, ಈ ದೇವಸ್ಥಾನದಲ್ಲಿ ಶಿವನ ಹನ್ನೆರಡು ಜ್ಯೋತಿರ್ಲಿಂಗ ದೇಗುಲಗಳಲ್ಲಿ ಮೊದಲನೇ ಜ್ಯೋತಿರ್ಲಿಂಗ ಎಂದು ನಂಬಲಾಗಿದೆ, ಹಾಗೂ ಈ ಪ್ರದೇಶವು ಗುಜರಾತ್ ನ ಮುಖ್ಯವಾದ ಯಾತ್ರಾ ಸ್ಥಳವಾಗಿದೆ.