Job Description: * ಪ್ರಸ್ತುತ ನೂತನ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಎಂದು ಹೆಸರು ಬದಲಾವಣೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. * ರಾಜ್ಯ ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕುಮಟಾ ಪ್ರಕಾಶ್ ನಡವಳಿಗಳನ್ನು ಹೊರಡಿಸಿದ್ದಾರೆ, ಈ ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಪಿಂಚಣಿ ಯೋಜನೆಯನ್ನು 2006 ರಲ್ಲಿ ಜಾರಿಗೆ ತರಲಾಗಿತ್ತು, ಸದ್ಯ ಈ ಯೋಜನೆಯನ್ನು ನೂತನ ಪಿಂಚಣಿ ಯೋಜನೆ ಎಂದು ಎಲ್ಲಾ ರಾಜ್ಯ ಪತ್ರಗಳಲ್ಲಿ ವ್ಯವಹಾರ ಮಾಡಲಾಗುತ್ತಿತ್ತು. * ಈ ನೂತನ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2013 ರ ಸೆಕ್ಷನ್ 20(1)ರೊಂದಿಗೆ ಒದಲಾದ ಸೆಕ್ಷನ್ 12(4)ರ ಅಡಿಯಲ್ಲಿನ ಅಧಿಕಾರವನ್ನು ಚಲಾವಣೆ ಮಾಡಿ ಇದನ್ನು ಇನ್ನು ಮುಂದೆ ರಾಷ್ಟ್ರೀಯ ಪಿಂಚಣಿ ಯೋಜನೆ ಎಂದು ಬದಲಾಯಿಸಿ, ಆದೇಶ ಹೊರಡಿಸಿದೆ.